ಗೋವಿಂದರಾಜು ಎನ್.ಎಸ್ ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು ಕರ್ನ್ ಲಿಬರ್ಸ್ ಇಂಡಿಯಾ ಪ್ರೈ. ಲಿ, ತುಮಕೂರು ಮಾನವ ಸಂಘಜೀವಿ ಮತ್ತು ಸಮಾಜಜೀವಿ. ತನ್ನ ಅಕ್ಕಪಕ್ಕ ಇತರರು ಇಲ್ಲದಿದ್ದರೆ ಆತನ ಜೀವನವೇ ಇಲ್ಲ. ತನ್ನ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ರೀತಿಯ ಸಂಬಂಧಗಳ ನಡುವೆ ಬದುಕುತ್ತಾನೆ. ಹಾಗಾದರೆ, ಸಂಬಂಧಗಳು ಎಂದರೇನು? ಅಪ್ಪ ಅಮ್ಮ ಇವರ ನಡುವೆ ಮಕ್ಕಳಿಗಿರುವ ಪ್ರೀತಿ ಪ್ರೇಮ ಒಡನಾಟ ಇವು ಸಂಬಂಧಗಳೇ? ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ ಇವರ ನಡುವೆ ಇರುವ ಸಂಬಂಧಗಳು ಸಂಬಂಧಗಳೇ? ಇವೆಲ್ಲವೂ ಸಂಬಂಧಗಳೇ. ನಾವು ಅಂದುಕೊಂಡ ಹಾಗೆಲ್ಲ ಸಂಬಂಧಗಳು ಮತ್ತು ನಾವು ಬೆಳೆಸಿಕೊಂಡ ಹಾಗೆ ಸಂಬಂಧಗಳು. ಒಳ್ಳೆಯ ಸಂಬಂಧಗಳು ಮತ್ತು ಕೆಲವೊಮ್ಮೆ ಒಳ್ಳೆಯವಲ್ಲದ ಸಂಬಂಧಗಳು ನಮ್ಮ ಅನುಭವಕ್ಕೆ ಬರಬಹುದು. ನನ್ನ ಪ್ರಕಾರ, ‘ನಾವು ಹೇಗೆ ಮತ್ತೊಬ್ಬರನ್ನು ಭಾವಿಸುತ್ತೇವೆ, ನಾವು ತೋರುವ ವರ್ತನೆಯ ಸಕಾರಾತ್ಮಕ ತೀವ್ರತೆ, ಅವರೊಡನೆ ಸಹಕರಿಸುವ ರೀತಿ, ಅವರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂಧಿಸುವ ರೀತಿ, ಅವರೊಡನೆ ನಡೆದುಕೊಳ್ಳುವ ರೀತಿ, ತೋರುವ ಪ್ರೀತಿ ವಾತ್ಯಲ್ಯ ಇವೆಲ್ಲವನ್ನೂ ಒಟ್ಟಾರೆಯಾಗಿ ಸಂಬಂಧಗಳು ಎನ್ನಬಹುದು.’
0 Comments
ಸ್ಮಯೋರ್ ಗಣಿ ಕಂಪನಿ ಸಂಡೂರು ರಾಜಮನೆತನದ ಮುಖ್ಯಸ್ಥರ ಒಡೆತನದಲ್ಲಿ 1954 ರಲ್ಲಿ ಪ್ರಾರಂಭಗೊಂಡಿದೆ. ಅಂದಿನ ಗಣಿಯ ವಿಸ್ತೀರ್ಣ ಸುಮಾರು ನಲವತ್ತೇಳು ಚದುರ ಕಿ.ಮೀ. ಇದ್ದು, ಸರ್ಕಾರದ ಕಾನೂನು ಮತ್ತು ಇತರೆ ಕಾರಣಗಳಿಗಾಗಿ, ಕಾಲಕಾಲಕ್ಕೆ ಕಡಿಮೆಯಾಗುತ್ತಾ, ಪ್ರಸ್ತುತ ಅದರ ವ್ಯಾಪ್ತಿ 3200 ಹೆಕ್ಟೇರ್‍ಗಳಿವೆ. ಉತ್ತಮ ಗುಣಮಟ್ಟದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರನ್ನು ಅನುಕ್ರಮವಾಗಿ ಮತ್ತು ವಾರ್ಷಿಕವಾಗಿ 2.54 ಲಕ್ಷ ಮತ್ತು 11.376 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಉತ್ಪಾದನೆಯನ್ನು ಆಂತರಿಕವಾಗಿ ಮಾರಾಟ ಮಾಡುವುದರ ಜೊತೆಗೆ ಹೊರ ದೇಶಗಳಿಗೆ ರಫ್ತನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ ಒಟ್ಟಾರೆಯಾಗಿ ಉದ್ಯೋಗಿ / ಕಾರ್ಮಿಕರ ಸಂಖ್ಯೆ 1972 ಇದೆ.
ಎಸ್.ಎನ್.ಗೋಪಿನಾಥ್ ಪಾಸ್ಟ್ ಛೇರ್‍ಮನ್ - ಎನ್‍ಐಪಿಎಂ, ಕರ್ನಾಟಕ ಚಾಪ್ಟರ್ ಇತ್ತೀಚಿನ ದಿನಗಳಲ್ಲಿ ಕೈಗಾರಿಕೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸಲು ಕೆಲವೊಂದು ಅಂಶಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯಾವುದೇ ಒಂದು ಸಂಸ್ಥೆ ಮುನ್ನಡೆಯಬೇಕು, ಪ್ರಗತಿಯನ್ನು ಸಾಧಿಸಬೇಕು ಎಂದಾದಲ್ಲಿ ಅದಕ್ಕೆ ಆರು ಅಂಶಗಳು ಅತಿಮುಖ್ಯ ಹಾಗೂ ಅತ್ಯವಶ್ಯಕ. ಅವುಗಳೆಂದರೆ ಮಾನವ ಸಂಪನ್ಮೂಲ, ಆಡಳಿತ ವ್ಯವಸ್ಥೆ, ಬಂಡವಾಳ, ಕಚ್ಚಾ ಪದಾರ್ಥ, ಯಂತ್ರಗಳು ಮತ್ತು ಮಾರುಕಟ್ಟೆ. ಈ ಆರರಲ್ಲಿ ಮಾನವ ಸಂಪನ್ಮೂಲ ಹಾಗೂ ಆಡಳಿತ ವ್ಯವಸ್ಥೆ ಅತಿ ಮುಖ್ಯವಾದ ಅಂಶಗಳು. ಇವರಿಬ್ಬರ ಸಂಬಂಧ ಪತಿ-ಪತ್ನಿಯರ ಬಾಂಧವ್ಯದ ಹಾಗೆ.
|
HR Learning and Skill Building AcademyStay updated and informed by joining our WhatsApp group for HR and Employment Law Classes - Every Fortnight. The Zoom link for the sessions will be shared directly in the group.
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
site map
SitePUBLICATIONSJob |
HR SERVICESOTHER SERVICESTraining |
POSHNGO & CSROur Other Website:subscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.
MHR Learning Academy
Copyright : MHRSPL-2021, website designed and developed by : www.nirutapublications.org.