M&HR
  • HOME
  • About Us
  • Our Services
    • Human Resource
    • Publications
    • NGO & CSR
    • PoSH
    • Training Programmes
    • Certificate Training Courses
  • MHR Learning Academy
  • Training Courses
  • Online Store
  • Leader's Talk
  • HR Blog
    • Kannada Blog
  • Find Freelance Jobs
  • Current Job Openings
  • Videos
  • Search
  • Join HR Online Groups
  • Contact Us
  • HOME
  • About Us
  • Our Services
    • Human Resource
    • Publications
    • NGO & CSR
    • PoSH
    • Training Programmes
    • Certificate Training Courses
  • MHR Learning Academy
  • Training Courses
  • Online Store
  • Leader's Talk
  • HR Blog
    • Kannada Blog
  • Find Freelance Jobs
  • Current Job Openings
  • Videos
  • Search
  • Join HR Online Groups
  • Contact Us
  M&HR

ಸ್ಥಾಯೀ ಆದೇಶಗಳ ಕಾಯಿದೆ

5/18/2022

0 Comments

 
Picture
Buy
ಸ್ವಾತಂತ್ರ್ಯ ಪೂರ್ವ ಭಾರತದ ಕಾಲಕ್ಕೆ ಸೇರಿದ ಔದ್ಯೋಗಿಕ ಕಾಯಿದೆಗಳಲ್ಲಿ ಸ್ಥಾಯೀ ಆದೇಶಗಳ ಕಾಯಿದೆಯು ಬಹಳ ಪ್ರಮುಖವಾದದ್ದು.  ಈ ಕಾಯಿದೆ ಜಾರಿಗೆ ಬಂದು ಸುಮಾರು ಎಪ್ಪತ್ತು ವರ್ಷಗಳಾಗಿದ್ದರೂ ಔದ್ಯೋಗಿಕ ಕರಾರುಗಳನ್ನು ನಿರ್ದೇಶಿಸುವಲ್ಲಿ ಈ ಕಾಯಿದೆಯ ಮಹತ್ವ  ಯಾವುದೇ ರೀತಿಯಲ್ಲಿಯೂ ಕಡಿಮೆಯಾಗಿಲ್ಲ. ನಿರ್ದಿಷ್ಟ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ಇಂದು ಈ ಕಾನೂನನ್ನು ಆಧರಿಸಿರುವ ಸ್ಥಾಯೀ ಆದೇಶಗಳ ಮೇಲೆಯೇ ನಿಂತಿರುವುದು. ಇಂದು ಕೈಗಾರಿಕಾ ಸಂಸ್ಥೆಗಳಲ್ಲಿ ಶಿಸ್ತು, ನಿಯಮ ಅಥವಾ ಒಂದು ಆಡಳಿತಾತ್ಮಕ ಸ್ಥಿರತೆ ಇದೆ ಎನ್ನುವುದಾದರೆ ಅದು ಸ್ಥಾಯೀ ಆದೇಶಗಳ ಕಾರಣದಿಂದ.
​
ಸ್ಥಾಯೀ ಆದೇಶಗಳ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಅದು ಉದ್ಯೋಗದಾತರಿಗೆ ಎಷ್ಟು ಪ್ರಮುಖವಾಗಿದೆಯೋ ಉದ್ಯೋಗಿಗಳಿಗೂ ಅದು ಅಷ್ಟೇ ಪ್ರಾಮುಖ್ಯವಾಗಿದೆ. ಈ ಆದೇಶಗಳಲ್ಲಿನ ಔದ್ಯೋಗಿಕ ಕರಾರುಗಳು ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಗೆ ಒಂದೇ ತೆರನಾದ ಭದ್ರತೆ ಒದಗಿಸಿದೆ.
 
ಸಂಸ್ಥೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು, ಉತ್ಪಾದನಾ ಪ್ರಕ್ರಿಯೆಯನ್ನು ನಿರ್ದೇಶಿಸಲು, ಒಬ್ಬ ಉದ್ಯೋಗಿ ಸಂಸ್ಥೆಯಲ್ಲಿ ಏನು ಮಾಡಬೇಕು ಅಥವಾ ಏನು ಮಾಡಬಾರದು  ಎನ್ನುವದನ್ನಷ್ಟೇ ಸ್ಥಾಯೀ ಆದೇಶಗಳು ತಿಳಿಸುವುದಿಲ್ಲ. ಅದರ ಜೊತೆಗೆ ಕೆಲವೊಂದು ಉದ್ಯೋಗದಾತರ ಅನೀತಿಯುತ ನಡವಳಿಕೆ, ಅನ್ಯಾಯಯುತ ನಿರ್ಧಾರಗಳಿಗೆ ತಡೆಯೊಡ್ಡುವುದಲ್ಲದೇ ಉದ್ಯೋಗಿಯೊಬ್ಬನಿಗೆ ಅವಶ್ಯವಾಗಿರುವ ಉದ್ಯೋಗ ಭದ್ರತೆಯನ್ನು ಕೂಡಾ ಒದಗಿಸುತ್ತದೆ. ಈ ಕಾರಣಗಳಿಂದಾಗಿಯೇ ಇಷ್ಟು ವರ್ಷಗಳು ಕಳೆದ ನಂತರವೂ  ಈ ಸ್ಥಾಯೀ ಆದೇಶಗಳ ಕಾಯಿದೆ ತನ್ನದೇ ಆದ ಜೀವಂತಿಕೆ ಉಳಿಸಿಕೊಂಡಿರುವುದು.
ಭಾರತದಲ್ಲಿನ ಔದ್ಯೋಗಿಕ ಕಾಯಿದೆಗಳು ಸ್ವತಂತ್ರಪೂರ್ವದಲ್ಲಿದ್ದ ರಾಜಕೀಯ ಮತ್ತು ಆರ್ಥಿಕ ಆಲೋಚನೆಗಳನ್ನು ಹೊರಹಾಕುತ್ತವೆ. ಆನಂತರ ಭಾರತದ ಸಂವಿಧಾನ, ಭಾರತದ ಸಂಸತ್ತು, ರಾಜ್ಯಗಳ ವಿಧಾನ ಮಂಡಲಗಳು, ಅಂತರ್ ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ಐ.ಎಲ್.ಒ)  ಶಿಫಾರಸುಗಳು, ಕಾರ್ಮಿಕ ಸಂಘಗಳ ಹೋರಾಟ, ಮಾನವ ಹಕ್ಕುಗಳು ಮತ್ತು ಔದ್ಯೋಗಿಕ ಸುರಕ್ಷತೆಯ ಬಗ್ಗೆ ಹೆಚ್ಚಿದ ಜಾಗೃತಿ, ಬದಲಾದ ರಾಜಕೀಯ, ಸಾಮಾಜಿಕ ಮತ್ತು ಅರ್ಥಿಕ ಪರಿಸ್ಥಿತಿಗಳು, ಉದ್ಯೋಗಿಗಳ ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮಾ ಕಾಯಿದೆ ಇವೇ ಮೊದಲಾದ ಸಾಮಾಜಿಕಾ ಸುರಕ್ಷಾ ಯೋಜನೆಗಳು, ಕೆಲಸದ ಹಕ್ಕುಗಳು, ತಾರತಮ್ಯತೆಯ ಬಗೆಗಿನ ವಿರೋಧ, ವೇತನ ಭದ್ರತೆ, ಬಾಲ ಕಾರ್ಮಿಕರ ನಿಷೇಧ , ನ್ಯಾಯಾಲಯಗಳ ಮಹತ್ವಪೂರ್ಣ ತೀರ್ಪುಗಳು ಭಾರತದ ಔದ್ಯೋಗಿಕ ಕಾಯಿದೆ ಮತ್ತು ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿವೆ.
 
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ  ಔದ್ಯೋಗಿಕ ಕಾಯಿದೆಗಳು ಬಹಳ ಬಿಗುವು ಮತ್ತು ಪ್ರತಿಬಂಧಕತೆಯಿಂದ ಕೂಡಿವೆ ಎಂದು ಹೇಳಬಹುದು. ಭಾರತದಲ್ಲಿ ಲಭ್ಯವಿದ್ದ ಹೇರಳ ಮಾನವ ಸಂಪನ್ಮೂಲ ಮತ್ತು ಅವುಗಳ ಶೋಷಣೆಯು ಕೂಡಾ ಗರಿಷ್ಠ ಪ್ರಮಾಣದಲ್ಲಿ ಇದ್ದುದರಿಂದ ಸರಕಾರ ಮತ್ತು ಕಾರ್ಮಿಕ ಸಂಘಗಳು ತಮ್ಮ ಮುಗ್ದ ಕಾರ್ಮಿಕರ ಹಿತಾಸಕ್ತಿಗಾಗಿ ಹೋರಾಡಿ ಅವರ ಹಕ್ಕುಗಳನ್ನು ರಕ್ಷಿಸಲು ಬಿಗಿಯಾದ ಕಾಯಿದೆಗಳನ್ನು ಜಾರಿಗೆ ತರಲು ಒತ್ತಾಯಿಸಬೇಕಾಯಿತು ಎಂಬ ಅಂಶವನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಬಿಗಿಯಾದ ಔದ್ಯೋಗಿಕ ಕಾಯಿದೆಗಳು ಕೈಗಾರಿಕಾ ಪ್ರಗತಿಗೆ ಮಾರಕವಾಯಿತು ಎಂಬ ಮಾತು ಒಂದು ವರ್ಗದಲ್ಲಿ ಕೇಳಿಬರುತ್ತದೆಯಾದರೂ ಒಂದು ವೇಳೆ ಈ ರೀತಿಯ ಬಿಗಿಯಾದ ಕಾನೂನುಗಳು ಇಲ್ಲದೇ ಇದ್ದರೆ ಭಾರತದ ಕೈಗಾರಿಕೆಗಳು ಭಾರಿ ಪ್ರಗತಿಯನ್ನು ಸಾಧಿಸುತ್ತಿದ್ದವು ಮತ್ತು ಶೋಷಣೆಮುಕ್ತ ಔದ್ಯೋಗಿಕ ವಲಯವನ್ನು ಸೃಷ್ಟಿಸುತ್ತಿದ್ದವು ಎಂಬುದಕ್ಕೆ ಒಂದಂಶದ ಪುರಾವೆಗಳು ದೊರಕುವುದಿಲ್ಲ. ಖಾಸಗಿ ವಲಯಕ್ಕೆ ಹೋಲಿಸಿದರೆ ಸಾರ್ವಜನಿಕ ವಲಯದಲ್ಲಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳ ಚಟುವಟಿಕೆ, ನಿಯಮಾವಳಿಗಳ ಅನುಸರಣೆ, ವೇತನದ ದರ ಇವೆಲ್ಲವೂ ಹೆಚ್ಚು. ಆದರೆ ಇವತ್ತಿಗೂ ಕೂಡಾ ದೇಶದ ಅತ್ಯುತ್ತಮ ಕೈಗಾರಿಕೆಗಳ ಉಲ್ಲೇಖ ಮಾಡುವಾಗ ನಮ್ಮ ಮುಂದೆ ಬರುವುದು ಮಹಾರತ್ನ ಸಂಸ್ಥೆಗಳಾದ ಬಿ.ಎಚ್.ಇ.ಎಲ್, ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಎನ್.ಟಿ.ಪಿ.ಸಿ, ಓ.ಎನ್.ಜಿ.ಸಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಜಿ.ಎ.ಐ.ಎಲ್ (ಇಂಡಿಯಾ) ಲಿಮಿಟೆಡ್ ಅಥವಾ ನವರತ್ನ ಸಂಸ್ಥೆಗಳಾದ ಬಿ.ಎ.ಎಲ್, ಬಿ.ಇ.ಎಂ.ಎಲ್, ಬಿ.ಎಸ್.ಎನ್.ಎಲ್ ಮುಂತಾದ ಸಂಸ್ಥೆಗಳೇ. ಅಧಿಕಾರಶಾಹಿಯು ಆಡಳಿತ ನಿರ್ವಹಣೆಯಲ್ಲಿ ಲೋಪಗಳನ್ನು ಮಾಡದೇ ಇದ್ದಿದ್ದರೆ ಬಹಳಷ್ಟು ಪ್ರಖ್ಯಾತವಾಗಿದ್ದ ಹಲವಾರು ಸಾರ್ವಜನಿಕ ವಲಯದ ಕೈಗಾರಿಕೆಗಳು ಇನ್ನೂ ಜೀವಂತವಾಗಿರುತಿದ್ದವು.

ಈಗಾಗಲೇ ತಿಳಿಸಿದಂತೆ ಸ್ಥಾಯೀ ಆದೇಶಗಳ ಕಾಯಿದೆ ಸ್ವತಂತ್ರಪೂರ್ವದ ಕಾಲಕ್ಕೆ ಸೇರಿದ ಕಾಯಿದೆ. ಆ ಕಾಲದಲ್ಲಿ ಮಾಡಿದ ಈ ಕಾಯಿದೆಯು ಸದೃಢವಾಗಿವೆ ಮತ್ತು ಸರಿಯಾಗಿ ಬಳಕೆಯಾದಲ್ಲಿ ಸಂಬಂಧಗಳನ್ನು ವೃದ್ದಿಸುವಲ್ಲಿ ಬಹಳ ಸಹಕಾರಿಯಾಗಿವೆ.  ೧೯೨೩ ರ ಕಾರ್ಮಿಕರ ಪರಿಹಾರ ಕಾಯಿದೆ, ೧೯೨೬ ರ ಕಾರ್ಮಿಕ ಸಂಘಗಳ ಕಾಯಿದೆ, ೧೯೩೬ ರ ವೇತನ ಸಂದಾಯ ಕಾಯಿದೆ, ಸ್ಥಾಯೀ ಆದೇಶಗಳ ಕಾಯಿದೆ, ೧೯೪೬ ಇವೆಲ್ಲಾ ಸತ್ವವಿರುವ ಕಾಯಿದೆಗಳೇ.  ಸ್ವಾತಂತ್ರ್ಯಾನಂತರ ಜಾರಿಗೆ ಬಂದ ಔದ್ಯೋಗಿಕ ಕಾಯಿದೆಗಳಿಗೆ ಹೋಲಿಸಿದರೆ ಈ ಕಾಯಿದೆಗಳನ್ನಿನ ತಿದ್ದುಪಡಿಗಳು ವಿರಳ.  ಈ ಒಂದು ಅಂಶ ಈ ಕಾಯಿದೆಗಳ ಮಹತ್ವ , ಪ್ರಭಾವ ಮತ್ತು ಗಟ್ಟಿತನವನ್ನು ತೋರಿಸುತ್ತದೆ.
 
ಪ್ರಸಕ್ತ ಈ ಸ್ಥಾಯೀ ಆದೇಶಗಳ ಕಾಯಿದೆ ನೂರು ಮತ್ತು ಅದಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳಿರುವ ಕೈಗಾರಿಕಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಉದ್ಯೋಗಿಗಳ ಸಂಖ್ಯೆಯ ಅನ್ವಯಿಸುವಿಕೆಯನ್ನು ೫೦ಕ್ಕೆ ಇಳಿಸಲಾಗಿದೆ.
 
೨೦೦೨ ರಲ್ಲಿ ತನ್ನ ವರದಿ ಸಲ್ಲಿಸಿದ ಭಾರತದ ಎರಡನೇ ರಾಷ್ಟ್ರೀಯ ಕಾರ್ಮಿಕ ಆಯೋಗ ೨೦ ಮತ್ತು ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲಿ ಸ್ಥಾಯೀ ಆದೇಶಗಳ ಕಾಯಿದೆ ಜಾರಿಗೆ ಶಿಫಾರಸು ಮಾಡಿದೆ. ಸ್ಥಾಯೀ ಆದೇಶಗಳಲ್ಲಿ ಒಳಗೊಂಡಿರಬೇಕಾದ ವಿಷಯಗಳನ್ನು ಸಂಕುಚಿತಗೊಳಿಸಬೇಕಾದ ಯಾವುದೇ ಅವಶ್ಯಕತೆಯಿಲ್ಲ ಮತ್ತು ಉಭಯ ಪಕ್ಷಗಳ ನಡುವೆ ಸಹಮತ ಏರ್ಪಟ್ಟಲ್ಲಿ ಬಹು ಕೌಶಲ್ಯ, ಉತ್ಪಾದನೆ, ಗುಣಮಟ್ಟ, ಉದ್ಯೋಗ ಶ್ರೀಮಂತಿಗೆ, ಉತ್ಪಾದಕತೆ ಮುಂತಾದ ವಿಷಯಗಳನ್ನು ಕೂಡಾ ಸ್ಥಾಯೀ ಆದೇಶಗಳ ವ್ಯಾಪ್ತಿಯಲ್ಲಿ ಸೇರಿಸಬಹುದು ಎಂದು ಹೇಳಿದೆ. ಅಲ್ಲದೇ ೫೦ ಕ್ಕಿಂತಾ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಪ್ರತ್ಯೇಕ ರೀತಿಯ ಸ್ಥಾಯೀ ಆದೇಶಗಳನ್ನು ರೂಪಿಸಬಹುದು ಎಂದು ಹೇಳಿರುವುದಲ್ಲದೇ ಒಂದು ಮಾದರಿ ಸ್ಥಾಯೀ ಆದೇಶಗಳ ಕರಡನ್ನು  ಕೂಡಾ ನೀಡಿದೆ.
 
ಕಳೆದ ಒಂದೆರಡು ವರ್ಷಗಳಿಂದ ನನ್ನ ಕೆಲವು ಉದ್ಯೋಗಿ ಮಿತ್ರರು ಈ ಕಾಯಿದೆ ಜಾರಿಗೆ ಬಂದು ಎಪ್ಪತ್ತಕ್ಕೂ ಹೆಚ್ಚಿನ ವರ್ಷಗಳಾಗಿದ್ದರೂ ಈ ಸ್ಥಾಯೀ ಆದೇಶಗಳು, ಅದಕ್ಕೆ  ಸಂಬಂಧಿಸಿದ ಕೇಂದ್ರೀಯ ನಿಯಮಗಳು, ಕಲ್ಲಿದ್ದಲ ಗಣಿಗಳು ಮತ್ತಿತರ ಸಂಸ್ಥೆಗಳಿಗೆ ಅನ್ವಯಿಸುವ ಮಾದರಿ ಸ್ಥಾಯೀ ಆದೇಶಗಳು, ಕರ್ನಾಟಕ ರಾಜ್ಯದ ನಿಯಮಗಳು, ಗುಮಾಸ್ತರಿಗೆ ಅನ್ವಯಿಸುವ ಮಾದರಿ ಸ್ಥಾಯೀ ಆದೇಶಗಳು ಜೀವನ ನಿರ್ವಹಣೆ ಭತ್ಯೆ ಕಾಯಿದೆ ಮತ್ತು ನಿಯಮಗಳುಮತ್ತು ಈ ಎಲ್ಲಾ ಕಾಯಿದೆ ಮತ್ತು ನಿಯಮಗಳಿಗೆ ಸಂಬಂಧಿಸಿದ ಇನ್ನಿತರ ಎಲ್ಲಾ ಮುಖ್ಯವಿಷಯಗಳಬಗ್ಗೆಇರುವನ್ಯಾಯಾಲಯಗಳ ಪ್ರಮುಖ ತೀರ್ಪುಗಳ ಬಗ್ಗೆ ಕನ್ನಡದಲ್ಲಿ ಪುಸ್ತಕವೇ ಇಲ್ಲ . ಹಾಗಾಗಿ ನೀವೇಕೆ ಅದನ್ನು  ಬರೆದು ಕರ್ನಾಟಕದ ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಉದ್ಯೋಗಿಗಳಿಗೆ ಸಹಾಯ ಮಾಡಬಾರದು ಎಂದು ತಿಳಿಸಿದಾಗಲೇ ಈ ಪುಸ್ತಕದ ಅಥವಾ ವಿಷಯದ ಮಹತ್ವವನ್ನು ಆಳವಾಗಿ ಅಧ್ಯಯನಿಸುವ ಅವಕಾಶ ನನಗೆ ದೊರೆತಿದ್ದು. ಇದೇ ರೀತಿಯ ಸಂದರ್ಭ ವರ್ಷ ೨೦೦೨ ಕೂಡಾ ಬಂದಿತ್ತು. ೧೯೨೬ ರ ಕಾರ್ಮಿಕ ಸಂಘಗಳ ಕಾಯಿದೆಯ ಬಗ್ಗೆ ಕನ್ನಡದಲ್ಲಿ ಪುಸ್ತಕಗಳೇ ಇಲ್ಲದಿದ್ದಾಗ ಮಿತ್ರರ ಒತ್ತಾಸೆಯ ಮೇರೆಗೆ  ಆ ಪುಸ್ತಕ ಬರೆಯುವ ಅವಕಾಶ ನನಗೆ ಬಂತು ಮತ್ತು ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಅದರಿಂದ ತುಂಬಾ ಪ್ರಯೋಜನವಾಯಿತು ಎಂಬ ಸಂತೃಪ್ತಿ ಈಗಲೂ ನಮಗಿದೆ.
 
ನಮ್ಮ ವೀನವೀ ಪ್ರಕಾಶನ ಸಂಸ್ಥೆಯ ಈ ಹಿಂದಿನ ಎಲ್ಲಾ ಪುಸ್ತಕಗಳು ಓದುಗರಿಗೆ ಬಹಳ ಉಪಯುಕ್ತವಾಗಿವೆ, ಹಾಗಾಗಿ ಓದುಗರು ಕೂಡಾ ಸಹೃದಯದಿಂದ ಅದನ್ನು ಪ್ರೋತ್ಸಾಹಿಸಿದ್ದಾರೆ.
 
ನಮ್ಮ ಈ ಪುಸ್ತಕದಿಂದ ಓದುಗರಿಗೆ ಯಾವುದೇ ಪ್ರಮಾಣದಲ್ಲಿ ಉಪಯೋಗವಾದರೇ , ಅವರಿಗೆ ಕಾನೂನಿನ ಬಗ್ಗೆ ಈಗಾಗಲೇ ಇರುವ ತಿಳುವಳಿಕೆಗೆ ಹೆಚ್ಚಿನ ಮೌಲ್ಯಗಳನ್ನು ಈ ಪುಸ್ತಕ ಒದಗಿಸಿದರೆ ಅದು ನಮ್ಮ ಸಂತೋಷ
 
ನಿಮ್ಮವ
ಎಂ ಆರ್ ನಟರಾಜ್ 
ಎಂ.ಎ (ಇತಿಹಾಸ), ಎಂ ಎ ( ಪುರಾತತ್ವ ಶಾಸ್ತ್ರ), ಎಂ.ಐ.ಎಂ.ಎ, ಪಿ..ಡಿ.ಎಚ್.ಆರ್.ಎಂ, ಪಿ.ಜಿ.ಡಿ,ಎಲ್.ಎಲ್, ಪಿ.ಜಿ.ಡಿ.ಪಿ.ಎಂ,ಐ.ಆರ್
ಪರಿವಿಡಿ
ಕೈಗಾರಿಕೆಗಳ ಔದ್ಯೋಗಿಕ (ಸ್ಥಾಯೀ ಆದೇಶಗಳ ) ಕಾಯಿದೆ,1946
  1. ಸಂಕ್ಷಿಪ್ತ ಶೀರ್ಷಿಕೆ, ವ್ಯಾಪ್ತಿ ಮತ್ತು ಅನ್ವಯಿಸುವಿಕೆ
  2. ವ್ಯಾಖ್ಯಾನಗಳು
  3. ಸ್ಥಾಯೀಆದೇಶಗಳಕರಡುಪ್ರತಿಯಸಲ್ಲಿಸುವಿಕೆ
  4. ಸ್ಥಾಯೀ ಆದೇಶಗಳನ್ನು ದೃಢೀಕರಿಸುವಿಕೆಯ ನಿಯಮಗಳು
  5. ಸ್ಥಾಯೀ ಆದೇಶಗಳ ದೃಢೀಕರಿಸುವಿಕೆ
  6. ಮೇಲ್ಮನವಿಗಳು
  7. ಸ್ಥಾಯೀ ಆದೇಶಗಳ ಜಾರಿ ದಿನಾಂಕ
  8. ಸ್ಥಾಯೀ ಆದೇಶಗಳ ದಾಖಲೆ ಪುಸ್ತಕ
  9. ಸ್ಥಾಯೀ ಆದೇಶಗಳ ಪ್ರದರ್ಶನ
  10. ಸ್ಥಾಯೀ ಆದೇಶಗಳ ಅವಧಿ ಮತ್ತು ಮಾರ್ಪಾಡುಗಳು
    10-ಎ   ಜೀವನ ನಿರ್ವಹಣೆ ಭತ್ಯೆ ಸಂದಾಯ
  11. ಸಿವಿಲ್ ಕೋರ್ಟ್ ಗಳಿಗೆ ಸಮನಾಂತರ ಅಧಿಕಾರವುಳ್ಳ ದೃಢೀಕರಣದ ಅಧಿಕಾರಿಗಳು ಮತ್ತು ಮೇಲ್ಮನವಿಯ ಪ್ರಾಧಿಕಾರ
  12. ಸ್ಥಾಯೀ ಆದೇಶಗಳಿಗೆ ವಿರುದ್ದವಾದ ಮೌಖಿಕ ಸಾಕ್ಷ್ಯಗಳನ್ನು ಸ್ವೀಕರಿಸುವುದಿಲ್ಲ
    [12-ಎ  ಮಾದರಿ ಸ್ಥಾಯೀ ಆದೇಶಗಳ ತಾತ್ಕಾಲಿಕ ಅನ್ವಯಿಸುವಿಕೆ
  13. ದಂಡನೆಗಳು ಮತ್ತು ಅದರ ಕಾರ್ಯ ವಿಧಾನಗಳು
    13-ಎ   ಸ್ಥಾಯೀ ಆದೇಶಗಳ ಅರ್ಥ ವಿವರಣೆ ಮತ್ತಿತರ ಅಂಶಗಳು
    13-ಬಿ   ಕೆಲವೊಂದು ಕೈಗಾರಿಕಾ ಸಂಸ್ಥೆಗಳಿಗೆ ಅನ್ವಯಿಸದ ಕಾಯಿದೆ
  14. ವಿನಾಯಿತಿ ನೀಡುವ ಅಧಿಕಾರ
    14-ಎ   ಅಧಿಕಾರದ ನಿಯೋಜನೆ
  15. ನಿಯಮಗಳನ್ನು ಮಾಡುವ ಅಧಿಕಾರ​ ​

ಷೆಡ್ಯೂಲ್ 1
ಕೈಗಾರಿಕೆಗಳ ಔದ್ಯೋಗಿಕ (ಸ್ಥಾಯೀ ಆದೇಶಗಳ ) ಕೇಂದ್ರೀಯ ನಿಯಮಗಳು 1946

ನಿಯಮ          1
ನಿಯಮ          2
ನಿಯಮ          2-ಎ
ನಿಯಮ          3
ನಿಯಮ          4
ನಿಯಮ          5
ನಿಯಮ          6
ನಿಯಮ          7
ನಿಯಮ          7-ಎ
ನಿಯಮ          8
 
ಷೆಡ್ಯೂಲ್ 1-ಎ
ಕಲ್ಲಿದ್ದಲ ಗಣಿಗಳಿಗೆ  ಅನ್ವಯಿಸುವ ಮಾದರಿ ಸ್ಥಾಯೀ ಆದೇಶಗಳು 
  1. ಆದೇಶಗಳ ದಿನಾಂಕ
  2. ವ್ಯಾಖ್ಯಾನಗಳು
  3. ಕಾರ್ಮಿಕರ ವರ್ಗೀಕರಣ
  4. ಗುರುತಿನ ಪತ್ರಗಳು
  5. ಸೂಚನೆಗಳ ಪ್ರಕಟಣೆ/ ಪ್ರದರ್ಶನ
  6. ವೇತನ ಸಂದಾಯ
  7. ಪಾಳೀ ಕೆಲಸ
  8. ಹಾಜರಾತಿ
  9. ಕೆಲಸದ ಸ್ಥಳದಿಂದ ಗೈರುಹಾಜರಿ
  10. ಹಬ್ಬದ ರಜೆ ಮತ್ತು ಇತರೇ ರಜೆ
  11. [XXXXX) ಕೈ ಬಿಡಲಾಗಿದೆ
  12. ರೈಲ್ವೈ ಪ್ರಯಾಣದ ಸೌಲಭ್ಯಗಳು
  13. ಉದ್ಯೋಗ ವಿಮುಕ್ತಿ
  14. ಕೆಲಸದ ಸ್ಥಗಿತ ಮತ್ತು ಪುನರಾರಂಭ
  15. ಹುದ್ದೆಗಳನ್ನು ಭರ್ತಿ ಮಾಡುವ ವಿಧಾನ
  16. [XXXX] ಕೈ ಬಿಡಲಾಗಿದೆ
  17. ದುರ್ನಡತೆಗಾಗಿ ಶಿಸ್ತಿನ ಕ್ರಮಗಳು
  18. ದೂರುಗಳು ಮತ್ತು ಮೇಲ್ಮನವಿ ಇತ್ಯಾದಿಗಳನ್ನು ಸಲ್ಲಿಸಲು ಇರುವ ಸಮಯದ ಗಡುವು
  19. ಗಣಿಯ ವ್ಯವಸ್ಥಾಪಕನ ಭಾಧ್ಯತೆಗಳು
  20. ಸೇವಾ ಪ್ರಮಾಣಪತ್ರ
  21. ಆಗಮನ ಮತ್ತು ನಿರ್ಗಮನ
  22. ಸ್ಥಾಯೀ ಆದೇಶಗಳ ಪ್ರದರ್ಶನ ಮತ್ತು ಹಂಚಿಕೆ
 
ಎಲ್ಲಾ ಕೈಗಾರಿಕೆಗಳ ಮಾದರಿ ಸ್ಥಾಯೀ ಅದೇಶಗಳಿಗೆ ಅನ್ವಯಿಸುವ ಹೆಚ್ಚುವರಿ ವಿಷಯಗಳು 
  1. ಸೇವಾ ದಾಖಲೆ
    (i)       ಸೇವಾದಾಖಲೆ/ ಪತ್ರ
    (ii)      ಸೇವಾ ಪ್ರಮಾಣ ಪತ್ರ
    (iii)      ಉದ್ಯೋಗಿಯನಿವಾಸದವಿಳಾಸ:
    (iv)      ವಯಸ್ಸಿನದಾಖಲೆ: 
  2. ಉದ್ಯೋಗ ಸ್ಥೀರೀಕರಣ
  3. ನಿವೃತ್ತಿಯ ವಯಸ್ಸು:
  4. ವರ್ಗಾವಣೆ:
  5. ಅಫಘಾತದ ಸಂದರ್ಭಗಳಲ್ಲಿ ವೈದ್ಯಕೀಯ ನೆರವು
  6. ವೈದ್ಯಕೀಯ ಪರೀಕ್ಷೆ:
  7. ಗೌಪ್ಯತೆ:
  8. ಹೊರತಾದ ಸೇವೆಗಳು:
    ಫಾರಂ –I
    ಫಾರಂ-II
    ಫಾರಂ-III
    ಫಾರಂ-IV
    ಫಾರಂ-IV-ಎ
    ಫಾರಂ-V
 
ಕರ್ನಾಟಕ ಕೈಗಾರಿಕೆಗಳ ಔದ್ಯೋಗಿಕ (ಸ್ಥಾಯೀ ಆದೇಶಗಳು) ನಿಯಮಗಳು, 1961
  1. ಸಂಕ್ಷಿಪ್ತ ಶೀರ್ಷಿಕೆ:
  2. ವ್ಯಾಖ್ಯಾನಗಳು
    ನಿಯಮ 3
    ನಿಯಮ4          
    ನಿಯಮ4-ಎ
    ನಿಯಮ5          
    ನಿಯಮ6          
    ನಿಯಮ6-ಎ
    ನಿಯಮ7          
    ನಿಯಮ8        
    ನಿಯಮ9         

ಷೆಡ್ಯೂಲ್  I
ನಿಯಮ 3 (1) ರ ಅಡಿಯಲ್ಲಿ ಅನ್ವಯಿಸುವ ಮಾದರಿ ಸ್ಥಾಯೀ ಆದೇಶಗಳು
  1. ಆದೇಶಗಳ ದಿನಾಂಕ
  2. ಉದ್ಯೋಗಿಗಳವರ್ಗೀಕರಣ
  3. ಗುರುತಿನ ಕಾರ್ಡುಗಳು /ಪತ್ರಗಳು
  4. ಕೆಲಸದ ವೇಳೆಯ ಪ್ರಕಟಣೆ
  5. ರಜಾ ದಿನಗಳ ಮತ್ತು ವೇತನ ಸಂದಾಯದ ದಿನಗಳ ಪ್ರಕಟಣೆ
  6. ವೇತನ ದರಗಳ ಪ್ತ್ರಕಟಣೆ
  7. ಪಾಳೀ ಕೆಲಸ
  8. ಹಾಜರಾತಿಮತ್ತುತಡವಾಗಿಬರುವಿಕೆ
  9. ರಜೆ
  10. ಅನಿಶ್ಚಿತ ರಜೆ
  11. ವೇತನಸಂದಾಯ
  12. ಆಗಮನ-ನಿರ್ಗಮನ
  13. ಕೆಲಸದ ಸ್ಥಗಿತ
  14. ಉದ್ಯೋಗ ವಿಮುಕ್ತಿ
  15. ದುರ್ನಡತೆಗಾಗಿ ಶಿಸ್ತಿನ ಕ್ರಮಗಳು
  16. ದೂರುಗಳು
  17. ಸೇವಾ ಪ್ರಮಾಣಪತ್ರ
  18. ವ್ಯವಸ್ಥಾಪಕನ ಬಾಧ್ಯತೆ:
  19. ಸ್ಥಾಯೀ ಆದೇಶಗಳ ಪ್ರಕಟಣೆ: 
 
ಗುಮಾಸ್ತರುಗಳ ಮಾದರಿ ಸ್ಥಾಯೀ ಆದೇಶಗಳು
ಪ್ಯಾರಾಗ್ರಾಫ್ 1
ಪ್ಯಾರಾಗ್ರಾಫ್ 2
ಪ್ಯಾರಾಗ್ರಾಫ್ 3
ಪ್ಯಾರಾಗ್ರಾಫ್ 4
ಪ್ಯಾರಾಗ್ರಾಫ್ 5
ಪ್ಯಾರಾಗ್ರಾಫ್ 6
ಪ್ಯಾರಾಗ್ರಾಫ್ 7
ಪ್ಯಾರಾಗ್ರಾಫ್ 8
ಪ್ಯಾರಾಗ್ರಾಫ್ 9
ಪ್ಯಾರಾಗ್ರಾಫ್ 10
ಪ್ಯಾರಾಗ್ರಾಫ್ 11
ಪ್ಯಾರಾಗ್ರಾಫ್ 12
ಪ್ಯಾರಾಗ್ರಾಫ್ 13
ಪ್ಯಾರಾಗ್ರಾಫ್ 14
ಪ್ಯಾರಾಗ್ರಾಫ್ 15
ಪ್ಯಾರಾಗ್ರಾಫ್ 16
ಪ್ಯಾರಾಗ್ರಾಫ್ 17
ಪ್ಯಾರಾಗ್ರಾಫ್ 18
ಪ್ಯಾರಾಗ್ರಾಫ್ 19
ಪ್ಯಾರಾಗ್ರಾಫ್ 20
ಪ್ಯಾರಾಗ್ರಾಫ್ 21
ಪ್ಯಾರಾಗ್ರಾಫ್ 22
ಪ್ಯಾರಾಗ್ರಾಫ್ 23
ಪ್ಯಾರಾಗ್ರಾಫ್ 24
ಪ್ಯಾರಾಗ್ರಾಫ್ 25
ಪ್ಯಾರಾಗ್ರಾಫ್ 26
ಪ್ಯಾರಾಗ್ರಾಫ್ 27
ಪ್ಯಾರಾಗ್ರಾಫ್ 28
ಪ್ಯಾರಾಗ್ರಾಫ್ 29 
 
SCHEDULE II
ಫಾರಂ    I
ಫಾರಂ   1 –A
ಫಾರಂ   II
ಫಾರಂ   II-A
ಫಾರಂ   III
 
ಕರ್ನಾಟಕ ಜೀವನ ನಿರ್ವಹಣೆ ಸಂದಾಯ ಕಾಯಿದೆ 1988
  1. ಸಂಕ್ಷಿಪ್ತ ಶೀರ್ಷಿಕೆ ಮತ್ತು ಪ್ರಾರಂಭ:
  2. ವ್ಯಾಖ್ಯಾನಗಳು
  3. ಜೀವನ ನಿರ್ವಹಣೆ ಭತ್ಯೆಯ ಸಂದಾಯ
  4. ಉದ್ಯೋಗದಾತರಿಂದ ಬಾಕಿ ಉಳಿದಿರುವ ಹಣದ ವಸೂಲಾತಿ:
  5. ನಿರ್ದಿಷ್ಟ ಹಕ್ಕುಗಳು ಮತ್ತು ವಿನಾಯಿತಿಗಳ ಸಂರಕ್ಷಣೆ
  6. ವಿನಾಯಿತಿ ನೀಡುವ ಅಧಿಕಾರ:
  7. ಸರಕಾರದ ಅಧಿಕಾರಗಳ ನಿಯೋಜನೆ
  8. ಸದ್ಭಾವನೆಯಿಂದ ಕೈಗೊಂಡ ಕ್ರಮಗಳ ಸಂರಕ್ಷಣೆ
  9. ದಂಡಗಳು
  10. ಸಂಸ್ಥೆಯ ಮಾಲೀಕ ಮತ್ತು ವ್ಯವಸ್ಥಾಪಕರಿಗೆ ನಿರ್ದಿಷ್ಟ ಸಂದರ್ಭಗಳಲ್ಲಿನ ವಿನಾಯಿತಿ       
  11. ಅಪರಾಧಗಳ ವಿಚಾರಣೆ
  12. ನಿಯಮಗಳನ್ನು ರೂಪಿಸುವ ಅಧಿಕಾರ
  
ಕರ್ನಾಟಕ ಜೀವನ ನಿರ್ವಹಣೆ ಭತ್ಯೆ ನಿಯಮಗಳು 2004 
  1. ಶೀರ್ಷಿಕೆ ಮತ್ತು ಪ್ರಾರಂಭ:
  2. ವ್ಯಾಖ್ಯಾನಗಳು:
  3. ಜೀವನ ನಿರ್ವಹಣೆ ಭತ್ಯೆ ಸಂದಾಯದ ನಿಬಂಧನೆಗಳು
  4. ಅಮಾನತ್ತಾಗಿರುವ ಉದ್ಯೋಗಿಗಳ ಬಗೆಗಿನ ವಿವರಗಳು:
  5. ಉದ್ಯೋಗಿಗೆ ಬಾಕಿ ಉಳಿದಿರುವ ಹಣವನ್ನು ವಸೂಲು ಮಾಡುವ ಅರ್ಜಿ:
  6. ರಿಜಿಸ್ಟರ್ ಮತ್ತು ಇತರೇ ನಮೂನೆಗಳನ್ನು ಸಂರಕ್ಷಿಸಬೇಕಾದ ಅವಧಿ
  
ಫಾರಂ   1
ಫಾರಂ   2
ಫಾರಂ   3
ಫಾರಂ   4
ಫಾರಂ   5
ಫಾರಂ   6
0 Comments



Leave a Reply.

    Archives

    May 2022

    Categories

    All
    HR Books

    RSS Feed


Site

  • Home
  • About Us
  • Leader's Talk
  • HR Blog
  • Find Freelance Jobs
  • Current Job Openings
  • Videos​​
Vertical Divider
  • MHR Learning Academy
Picture
Download App Here
Online app Courses
ONLINE STORE
Vertical Divider

Contact Us

  • 080-23213710, +91-8073067542
  • E-mail - hrniratanka@mhrspl.com
Our Other Websites:
  • www.nirutapublications.org
  • www.niratanka.org

Picture
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.

    Join our online groups 

    20,000 HR PROFESSIONALS ARE CONNECTED THROUGH OUR NIRATHANKA HR GROUPS. YOU CAN ALSO JOIN AND PARTICIPATE IN OUR GROUP DISCUSSIONS.
Subscribe to Newsletter
Join HR Online Groups

Copyright : MHRSPL-2021, website designed and developed by : www.nirutapublications.org.