‘ಉದ್ಯೋಗಿಗಳ ಪಿಂಚಣಿ ಯೋಜನೆ’ಯ (ಇಪಿಎಸ್) ಲಾಭ–ನಷ್ಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರು ಆಯ್ಕೆ ಮಾಡಿಕೊಳ್ಳಬಹುದು, ಆಯ್ಕೆ ಮಾಡಿಕೊಳ್ಳುವ ಬಗೆ ಹೇಗೆ, ನಿವೃತ್ತಿಯ ಬಳಿಕ ಭವಿಷ್ಯನಿಧಿಯ ಇಡುಗಂಟು ಎಷ್ಟು ಸಿಗುತ್ತದೆ ಹಾಗೂ ಪಿಂಚಣಿ ಎಷ್ಟು ಬರಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಎಲ್ಲರಿಗೂ ತಿಳಿದಿರುವ ಹಾಗೆ, ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ಉದ್ಯೋಗಿಯ ಪ್ರತಿ ತಿಂಗಳ ಮೂಲವೇತನ ಮತ್ತು ತುಟ್ಟಿಭತ್ಯೆಯ (ಡಿ.ಎ) ಶೇ 12ರಷ್ಟನ್ನು ವಂತಿಗೆಯಾಗಿ ಪಾವತಿಸಲಾಗುತ್ತದೆ. ಇಷ್ಟೇ ಪ್ರಮಾಣದ ವಂತಿಗೆಯನ್ನು ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯು ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ನೀಡುತ್ತದೆ. ಉದ್ಯೋಗದಾತ ಸಂಸ್ಥೆ ಪಾವತಿಸುವ ವಂತಿಗೆಯಿಂದ ಶೇ 8.33ರಷ್ಟು ಪ್ರಮಾಣವು ಇಪಿಎಫ್‌ನಿಂದ ಇಪಿಎಸ್‌ಗೆ ವರ್ಗಾವಣೆಯಾಗುತ್ತದೆ. ಆದರೆ, ಭವಿಷ್ಯ ನಿಧಿಗೆ ಪಾವತಿಯಾಗುವ ಉದ್ಯೋಗಿಯ ಪಾಲಿನ ಶೇ 12ರಷ್ಟು ಪ್ರಮಾಣವು ಇಪಿಎಫ್‌ನಲ್ಲಿಯೇ ಉಳಿಯುತ್ತದೆ. ಪಿಂಚಣಿ ನಿಧಿಗೆ ವರ್ಗಾವಣೆಯಾಗುವ ಮೊತ್ತವು, ಉದ್ಯೋಗಿ ನಿವೃತ್ತಿಯಾದ ಬಳಿಕ ಈ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪಾವತಿಯಾಗುತ್ತದೆ.
1 Comment
|
|
site map
Copyright : MHRSPL-2021, website designed and developed by : www.nirutapublications.org.