ಮುನ್ನುಡಿ ನಮ್ಮ ಪ್ರೀತಿಯ ಹುಡುಗ ಶೇಖರ್ ತಮ್ಮೆಲ್ಲಾ ಕೆಲಸ ಕಾರ್ಯಗಳ ಒತ್ತಡಗಳ ಮಧ್ಯೆ ಸಮಯ ಹೊಂದಿಸಿಕೊಂಡು ಈ ಹೊತ್ತಿಗೆ ಬದುಕು ಬದಲಾಯಿಸಿದ ಕಥನಗಳು ಹೊರತಂದಿರುವುದು ಬಹಳ ಹೆಮ್ಮೆಯ ವಿಚಾರ. ನನ್ನ ಹಾಗೂ ಶೇಖರ್‍ರ ಒಡನಾಟದ ಈ 8-10 ವರ್ಷಗಳಲ್ಲಿ ನಾನು ಕಂಡಿದ್ದು ಅವರ ಎರಡು ವಿಭಿನ್ನ ಆದರೆ ಸಹಜ ಪೂರಕ ವ್ಯಕ್ತಿತ್ವಗಳು. ಅವರ ಬಾಹ್ಯ ವ್ಯಕ್ತಿತ್ವ ಕಾರ್ಯನಿಷ್ಠೆ ಮತ್ತು ಕುಶಲತೆಯನ್ನು ವ್ಯಕ್ತಪಡಿಸಿದರೆ, ಆಂತರ್ಯದ ವ್ಯಕ್ತಿತ್ವ ಸೃಜನಶೀಲತೆ ಮತ್ತು ಸಂವೇದನಾಶೀಲತೆಯನ್ನು ತೋರುವಂತಹುದಾಗಿದೆ. ಬಾಲ್ಯಾವಸ್ಥೆಯಲ್ಲಿ ಹಳ್ಳಿಯ ವಾತಾವರಣದಲ್ಲಿ, ಸಗಣಿ ಸಾರಿಸಿದ ನೆಲದಲ್ಲಿ, ಹೊಲ, ಪ್ರಾಣಿ, ಪಕ್ಷಿಗಳ ಮಧ್ಯದಲ್ಲಿ ರೂಪುಗೊಂಡ ವ್ಯಕ್ತಿತ್ವ ಮುಂದೆ ಬೆಂಗಳೂರು ನಗರ ಕೊಡುವ ಐಷಾರಾಮದ ಸಕಲ ಆಧುನಿಕ ಸೌಕರ್ಯಗಳ ಬದುಕಿಗೆ ಮಾರ್ಪಾಡಾಗಿರುವ ನೈಜತೆಯನ್ನು ಈ ಹೊತ್ತಿಗೆಯಲ್ಲಿ ಅವರಿಗೆ ಪ್ರದತ್ತವಾದ ಆಡುಭಾಷೆಯ ಸಹಜ ಶೈಲಿಯಲ್ಲಿ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಇಂತಹ ಮಹಾ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಶೇಖರ್ ತಮಗೆ ಚಿಕ್ಕಂದಿನಲ್ಲಿ ತಂದೆ ತಾಯಿಯರು, ಗುರುಗಳು ಹಾಗೂ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಯಾವ ರೀತಿಯಲ್ಲಿ ಈ ಮಟ್ಟ ತಲುಪಲು ಸಾಧ್ಯವಾಯಿತು ಅನ್ನುವುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಶೇಖರ್ ತಮ್ಮ ಈ ಮಾರ್ಪಾಡಿನ ಪ್ರಕ್ರಿಯೆಯ ಪ್ರತಿ ಮಜಲಿನಲ್ಲೂ ಎದುರಿಸಿದ ದ್ವಂದ್ವ ಬಹುಶಃ ನಾವೆಲ್ಲರೂ ಯಾವುದೋ ಒಂದು ಘಟ್ಟದಲ್ಲಿ ಅನುಭವಿಸಿರುವ ದಿನಗಳನ್ನು ನಮಗೆ ನೆನಪಿಸಿಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಅವರ ಅಂತಃಕರಣದ ನುಡಿಗಳು ನಮಗರಿವಿಲ್ಲದಂತೆ ಅವರೆಡೆಗೆ ನಮ್ಮನ್ನು ಸೆಳೆದುಬಿಡುತ್ತದೆ. ನಮ್ಮ ಒಳಗಿನ ವ್ಯಕ್ತಿತ್ವದ ಆತ್ಮವಿಶ್ವಾಸ ಮತ್ತು ನಮ್ಮ ಬಾಹ್ಯ ವ್ಯಕ್ತಿತ್ವದ ಆತ್ಮವಿಶ್ವಾಸದ ಕೊರತೆ (inferiority complex) ನಡುವಿನ ದ್ವಂದ್ವ ಯುದ್ಧದ ಫಲಿತಾಂಶದ ಮೇಲೆ ನಮ್ಮ ವೈಯಕ್ತಿಕ ಬೆಳವಣಿಗೆ ನಿಂತಿದೆ ಎನ್ನುವುದನ್ನು ಹಲವಾರು ನೈಜ ನಿದರ್ಶನಗಳ ಮೂಲಕ ಬಹಳ ಪರಿಣಾಮಕಾರಿಯಾಗಿ ಮನತಟ್ಟುವಂತೆ ಶೇಖರ್ ಚಿತ್ರಿಸಿದ್ದಾರೆ. ಶೇಖರ್ ಎಂಬ ಗಿಡ, ಇಂದು ಒಂದು ವೃಕ್ಷವಾಗಿ ಬೆಳೆಯಲು ಕಾರಣರಾದ ಅವರ ತಂದೆ, ತಾಯಿ, ಕಾಂತಮ್ಮ ಟೀಚರ್, ಗುರು ರಾಘವನಾಥ್, ಸಹೋದ್ಯೋಗಿಗಳು, ಮಡದಿ ಹಾಗೂ ಮಗಳನ್ನು ಬಹಳ ಆತ್ಮೀಯತೆಯಿಂದ ಬೇರೆ ಬೇರೆ ದೃಷ್ಟಾಂತಗಳ ಮೂಲಕ ಸ್ಮರಿಸಿಕೊಂಡಿದ್ದಾರೆ. ಶೇಖರ್ ಅವರ ಬರವಣಿಗೆಯ ಶೈಲಿ ಅತ್ಯಾಕರ್ಷಕ. ಬರವಣಿಗೆಯ ಬದುಕು ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಸೂಚನೆಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಇಂಗ್ಲಿಷ್ಮಯವಾಗಿರುವ ಬೆಂಗಳೂರಿನ ಇಂದಿನ ಒತ್ತಡದ ಜೀವನದಲ್ಲಿ ಶೇಖರ್‍ರ ಈ ಕನ್ನಡದ ಕೃತಿಯ ತಂಗಾಳಿಯ ತಂಪು ಹಾಗೂ ಕೋಗಿಲೆಯ ಇಂಪನ್ನು ನಾವು ನೀವೆಲ್ಲಾ ಆಸ್ವಾದಿಸುತ್ತಾ ಅವರನ್ನು ಕನ್ನಡ ಸಾರಸ್ವತ ಲೋಕಕ್ಕೆ ತುಂಬುಹೃದಯದಿಂದ ಸ್ವಾಗತಿಸೋಣ. ಬಿ.ಸಿ. ಪ್ರಭಾಕರ್ ಅಧ್ಯಕ್ಷರು - ಕರ್ನಾಟಕ ಮಾಲೀಕರ ಸಂಘ ಮತ್ತು ವಕೀಲರು - ಬಿಸಿಪಿ ಅಸೊಸಿಯೇಟ್ಸ್ 1. ಮನದ ಕದ ತಟ್ಟಿದ ಪತ್ರ
2. ಲೋಕಾತೀತಪುರುಷ! 3. ನಂಬಿಕೆ...ದಾರಿ ಬೆಳಕು 4. ನಮ್ಮ ಜೀವನ, ನಮ್ಮ ಆಯ್ಕೆ 5. ನಮ್ಮತನ 6. ಇತರರ ಬೆಳಕು 7. ನಮ್ಮಲ್ಲಿರುವುದು ಮಹತ್ವವಾದದ್ದು... 8. ಅಪ್ಪನ 25 ಪೈಸೆಯ ಮಿಠಾಯಿ 9. ವ್ಯಕ್ತಿತ್ವ...ವ್ಯಕ್ತಿತ್ವದೊಂದಿಗೆ... 10. ತುಸು ಹೆಚ್ಚಿನ ಶ್ರಮ... 11. ಉತ್ಕಟವಾದ ಆಯ್ಕೆಗಳು 12. ಮಂಗಳಮುಖಿ... 13. ಉಚಿತ ಊಟವಿಲ್ಲ... 14. ಹಸಿರು ಮಾಯವಾಯಿತು... 15. ಕೊಂಚ ಜಾಸ್ತಿ ಬೇಕು... 16. ನಕಾರಾತ್ಮಕತೆಯಲ್ಲಿಯೂ ಸಕಾರಾತ್ಮಕತೆಯಿದೆ... 17. ಅಮ್ಮನ ವಿಮಾನದ ಆಸೆ... 18. ನಾವು ನೋಯಿಸುವುದರಲ್ಲಿ ನಿಸ್ಸೀಮರು...? 19. ನನ್ನ ಸೂಪರ್ ಹೀರೋ... 20. ಆ ವ್ಯಕ್ತಿತ್ವಗಳ ಸಾಕ್ಷಾತ್ಕಾರ... 21. ನೋವಿನಲ್ಲೂ ಸಂಬಂಧಗಳು... 22. ಬದಲಾವಣೆ ಬದಲಾಯಿಸಬಲ್ಲದು... 23. ಬದಲಾಯಿಸಿದ ಪ್ರಾಮಾಣಿಕತೆ 24. ಅಪ್ಪನ ಎರಡನೆಯ ಮಗ... 25. ಗುರುಗಳಿಗೆ ಅರ್ಪಣೆ... 26. ಅತ್ತೆ, ಸೊಸೆಯಾಗಬೇಕೆಂಬ ಆಸೆ... 27. ನಿನ್ನೊಳಗಿನ ಕೌಶಲ್ಯವೇ, ನಿನ್ನ ಶಕ್ತಿ... 28. ನಾಯಕ, ನಾಯಕನಿಗೆ ತೋರಿಸಿದ ದಾರಿ... ಗುರುಗಳ ನಲ್ನುಡಿಗಳು
0 Comments
Leave a Reply. |
Archives
September 2024
Categories
All
HR Learning and Skill Building AcademyStay updated and informed by joining our WhatsApp group for HR and Employment Law Classes - Every Fortnight. The Zoom link for the sessions will be shared directly in the group.
MHR LEARNING ACADEMYGet it on Google Play store
|
site map
SitePUBLICATIONSJob |
HR SERVICESOTHER SERVICESTraining |
POSHNGO & CSROur Other Website:subscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.
MHR Learning Academy
Copyright : MHRSPL-2021, website designed and developed by : www.nirutapublications.org.