ಲೇಖಕರು: ಪ್ರದೀಪ ಎಂ.ಪಿ. ಪುಟಗಳು: 272 ಪರಿವಿಡಿ ಅಧ್ಯಾಯ ಒಂದು - ಮಾನವನ ಹುಟ್ಟು ಮತ್ತು ವಿಕಾಸ
ಅಧ್ಯಾಯ ಎರಡು - ಮೆದುಳು ಮತ್ತು ನರ ಮಂಡಲ ವ್ಯವಸ್ಥೆ
ಅಧ್ಯಾಯ ಮೂರು - ಮಾನವನಲ್ಲಿ ಆನುವಂಶಿಯತೆ
ಅಧ್ಯಾಯ ನಾಲ್ಕು - ಮಾನವರಲ್ಲಿ ಪ್ರಜನನ ಕ್ರಿಯೆ
ಅಧ್ಯಾಯ ಐದು - ವಿಕಾಸ ಮತ್ತು ವಿಕಾಸದ ಹಂತಗಳು ಹಾಗೂ ಚಟುವಟಿಕೆಗಳು
ಅಧ್ಯಾಯ ಆರು - ಮನೋಸಮಾಜಕಾರ್ಯ
ಅಧ್ಯಾಯ ಏಳು - ಮನೋವಿಜ್ಞಾನದ ವಿಕಾಸ
ಅಧ್ಯಾಯ ಎಂಟು - ಮಾನಸಿಕ ಕಾಯಿಲೆಗಳು
ಅಧ್ಯಾಯ ಒಂಬತ್ತು - ಮನೋವಿಜ್ಞಾನದ ಸಿದ್ಧಾಂತಗಳು
ಅಧ್ಯಾಯ ಹತ್ತು - ಮನೋರೋಗ ಪರಿಕ್ಷಾ ವಿಧಾನಗಳು
ಅಧ್ಯಾಯ ಹನ್ನೊಂದು - ಮನೋರೋಗಗಳ ಚಿಕಿತ್ಸೆ
ಅಧ್ಯಾಯ ಹನ್ನೆರಡು - ಆಪ್ತ ಸಮಾಲೋಚನೆ
ಅಧ್ಯಾಯ ಹದಿಮೂರು - ಮಾನಸಿಕ ಅಸ್ವಸ್ಥರಿಗೆ ಪುನಶ್ಚೇತನ
ಗ್ರಂಥ ಋಣ/ ಪರಾಮರ್ಶನ ಗ್ರಂಥಗಳು ಮುನ್ನುಡಿ ಎಲ್ಲಾ ವಿಜ್ಞಾನಗಳ ಉಗಮ ತತ್ವಶಾಸ್ತ್ರದಿಂದಾಗಿದ್ದು, ಸಮಾಜವಿಜ್ಞಾನ ನಿಕಾಯಕ್ಕೆ ಮನೋಶಾಸ್ತ್ರದ ಅರಿವು ಬಹಳ ಮುಖ್ಯವಾಗಿದೆ. ಮನೋಶಾಸ್ತ್ರವನ್ನು ಅರಿಯದ ಹೊರತು ಎಲ್ಲಾ ಸಮಾಜ ವಿಜ್ಞಾನಗಳನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಸಮಾಜ ವಿಜ್ಞಾನದ ಅನ್ವಯಿಕ ಭಾಗವಾಗಿರುವ ಸಮಾಜಕಾರ್ಯ ಶಿಕ್ಷಣ ಹಾಗೂ ಅನ್ವಯಿಸುವಿಕೆಯಲ್ಲಿ ಮನೋಶಾಸ್ತ್ರದ ಜ್ಞಾನ ಅತ್ಯಮೂಲ್ಯವಾಗಿದ್ದು, ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆಯಲ್ಲಿ, ಅಂದರೆ ವ್ಯಕ್ತಿಗಳೊಂದಿಗೆ, ವೃಂದಗಳೊಂದಿಗೆ ಹಾಗೂ ಸಮುದಾಯ ಸಂಘಟನೆಯಲ್ಲಿ ಕಾರ್ಯನಿರ್ವಹಿಸಲು, ಮನೋಶಾಸ್ತ್ರದ ಜ್ಞಾನ ಅವಶ್ಯಕವಾಗಿದ್ದು ಈ ಜ್ಞಾನದ ಹೊರತು ಸಮಾಜಕಾರ್ಯದ ಅನ್ವಯಿಸುವಿಕೆ ಕಠಿಣವಾಗಿದೆ. ಈ ನಿಟ್ಟಿನಲ್ಲಿರುವ ಬರಹಗಾರ ಪ್ರದೀಪ ಎಂ.ಪಿ ತನ್ನ ಚೊಚ್ಚಲ ಪ್ರಯತ್ನದಲ್ಲಿ ಸಮಾಜಕಾರ್ಯದಲ್ಲಿ ಮನೋವಿಜ್ಞಾನ ಎಂಬ ಹೊತ್ತಿಗೆಯನ್ನು ರಚಿಸಿದ್ದು, ಸ್ಥಳೀಯ ಸಮಾಜಕಾರ್ಯ (ಇಂಡೀಜಿನಿಯಸ್ ಸೋಷಿಯಲ್ ವರ್ಕ್) ಜಾರಿಗೆ ತರುವ ನಿಟ್ಟಿನಲ್ಲಿ ಕನ್ನಡದಲ್ಲಿ ಸಮಾಜಕಾರ್ಯದ ಸಾಹಿತ್ಯದ ಕೊರತೆ ನೀಗಿಸುವ ಪ್ರಯತ್ನಕ್ಕೆ ಅಭಿನಂದಿಸುತ್ತಾ, ಸಮಾಜಕಾರ್ಯ ವಿಷಯದ ಕುರಿತು ಮತ್ತಷ್ಟು ಬರಹಗಳು ತಮ್ಮ ಲೇಖನಿಯಿಂದ ಒಡಮೂಡಲಿ ಎಂದು ಆಶಿಸುತ್ತೇನೆ.
ಸಮಾಜಕಾರ್ಯದಲ್ಲಿ ಮನೋವಿಜ್ಞಾನ ಎಂಬ ಪುಸ್ತಕವು ಹದಿಮೂರು ಅಧ್ಯಾಯಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಅಧ್ಯಾಯವು ವಿಭಿನ್ನ ವಿಷಯಗಳ ಕುರಿತು ವಿವರಿಸುತ್ತದೆ. ಮಾನವನ ಹುಟ್ಟು ಮತ್ತು ವಿಕಾಸ, ಮೆದುಳು ಮತ್ತು ನರಮಂಡಲ ವ್ಯವಸ್ಥೆ, ಮಾನವನಲ್ಲಿ ಅನುವಂಶೀಯತೆ, ಮಾನವರಲ್ಲಿ ಪಚನಕ್ರಿಯೆ, ವಿಕಾಸ ಮತ್ತು ವಿಕಾಸದ ಹಂತಗಳು ಹಾಗೂ ಚಟುವಟಿಕೆಗಳು, ಮನೋಸಮಾಜಕಾರ್ಯ, ಮನೋವಿಜ್ಞಾನದ ವಿಕಾಸ, ಮಾನಸಿಕ ಕಾಯಿಲೆಗಳು, ಮನೋವಿಜ್ಞಾನದ ಸಿದ್ಧಾಂತಗಳು, ಮನೋರೋಗ ಪರೀಕ್ಷಾ ವಿಧಾನಗಳು, ಆಪ್ತಸಮಾಲೋಚನೆ ಮತ್ತು ಮಾನಸಿಕ ಅಸ್ವಸ್ಥರಿಗೆ ಪುನಃಶ್ಚೇತನ ಎಂಬ ವಿಷಯಗಳ ಕುರಿತು ಮನೋಶಾಸ್ತ್ರದ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಒಳಗೊಳ್ಳುವ ಹಾಗೂ ಸಮಾಜಕಾರ್ಯದಲ್ಲಿ ಮನೋಶಾಸ್ತ್ರದ ಬಳಕೆ ಕುರಿತು ವ್ಯಾಪಕವಾದಂತಹ ವಿವರಣೆಗಳು ಲಭಿಸುತ್ತವೆ. ಈ ಕಿರುಹೊತ್ತಿಗೆ ಎಲ್ಲಾ ಸ್ನಾತಕ ಹಾಗೂ ಸ್ನಾತಕೊತ್ತರ ಸಮಾಜಕಾರ್ಯ ವಿಭಾಗದಲ್ಲಿ ವೃತ್ತಿಪರ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ, ವೃತ್ತಿಪರ ಸಮಾಜಕಾರ್ಯಕರ್ತರಿಗೆ ಹಾಗೂ ಸಮಾಜಕಾರ್ಯ ಶಿಕ್ಷಕರಿಗೆ ತಮ್ಮ ಜ್ಞಾನ ಹಾಗೂ ಅಭ್ಯಾಸದ ವಿಸ್ತರಣೆಗೆ ಸಹಕಾರಿಯಾಗಲಿ ಎಂದು ಆಶಿಸುತ್ತೇನೆ. ಪ್ರೊ.ರಮೇಶ್ ಬಿ. ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.
1 Comment
Moulasaba
6/16/2021 10:27:14 pm
ಚನ್ನಾಗಿದೆ
Reply
Leave a Reply. |
Archives
September 2020
Categories
All
|
Site |
Vertical Divider
|
JOIN HR ONLINE GROUPS
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
Vertical Divider
|
Contact Us
No. 326, 2nd Floor, Opp. Canara Bank, Near Dr. AIT College, Kengunte, Mallathahalli, Bangalore - 560 056
Our Other Websites:
|
Copyright : MHRSPL-2021, website designed and developed by : www.nirutapublications.org