M&HR
  • HOME
  • About Us
  • HR Blog
  • POSH
    • Prevention of Sexual Harassment at Workplace (POSH) Online Training
    • Certificate course on Prevention of Sexual Harassment at Workplace (POSH)
    • Certificate course on Prevention of Sexual Harassment at Workplace (POSH)
    • POSH Training
  • Services
    • Domestic Enquiry
    • Payroll Services
  • HR Job Openings
  • HR Online Groups
  • Videos
  • Online Store
  • List Your Product on Our Website
  • SEARCH
  • Contact Us
    • Office Login
  • HOME
  • About Us
  • HR Blog
  • POSH
    • Prevention of Sexual Harassment at Workplace (POSH) Online Training
    • Certificate course on Prevention of Sexual Harassment at Workplace (POSH)
    • Certificate course on Prevention of Sexual Harassment at Workplace (POSH)
    • POSH Training
  • Services
    • Domestic Enquiry
    • Payroll Services
  • HR Job Openings
  • HR Online Groups
  • Videos
  • Online Store
  • List Your Product on Our Website
  • SEARCH
  • Contact Us
    • Office Login
M&HR

ವೃಂದಗತ ಸಮಾಜಕಾರ್ಯ

8/4/2020

0 Comments

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟಗಳು : 336
PayUMoney
ಪರಿವಿಡಿ
ಮುನ್ನುಡಿ
ಪ್ರಕಾಶಕರ
ಪ್ರಸ್ತಾವನೆ-ಕೃತಜ್ಞತೆ
ಲೇಖಕರ ಪರಿಚಯ
 
ಅಧ್ಯಾಯ - ಒಂದು
ಪೀಠಿಕೆ:- ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳು.
 
ಅಧ್ಯಾಯ - ಎರಡು
ವೃಂದಗಳ ಅರ್ಥಗ್ರಹಿಕೆ:- ವ್ಯಾಖ್ಯೆಗಳು, ಜಮಾವಣೆ, ಸಮಷ್ಟಿತನ ಮತ್ತು ವೃಂದಗಳ ವ್ಯತ್ಯಾಸ, ವೃಂದದ ಅಂಶಗಳು, ವೃಂದದ ಪ್ರಕಾರಗಳು,
 
ಅಧ್ಯಾಯ - ಮೂರು
ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು:- ವ್ಯಾಖ್ಯೆಗಳು, ವಿಸ್ತೃತ ವ್ಯಾಖ್ಯೆ, ಸ್ವಯಂಪ್ರೇರಣೆ ಅಥವಾ ಕಾರ್ಯಕರ್ತನ ಪ್ರೇರಣೆ, ವೃಂದದ ಸದಸ್ಯರ ಸಂಖ್ಯೆ, ಕಾರ್ಯಕರ್ತನ ಮಾರ್ಗದರ್ಶನ, ಅಂತರಕ್ರಿಯೆ-ಪಾರಸ್ಪರಿಕ ಕ್ರಿಯೆ, ಸಂಪರ್ಕ, ಹೊಂದಾಣಿಕೆ, ಗುಂಪಿನ ವಾತಾವರಣ, ಚಟುವಟಿಕೆಗಳು, ಅನುಭವ, ನಿಶ್ಚಿತ ಯೋಜನೆಗಳು, ಕಾರ್ಯಕ್ರಮಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೃಂದಗತ ಸಮಾಜಕಾರ್ಯದ ಗ್ರಹಿಕೆಗಳು, ವೃಂದಗತ ಸಮಾಜಕಾರ್ಯದ ಲಕ್ಷಣಗಳು, ವೃಂದಗತ ಸಮಾಜಕಾರ್ಯದ ಧ್ಯೇಯೋದ್ದೇಶಗಳು, ಉದ್ದೇಶಗಳ ಪ್ರಕಾರಗಳು, ಸೇವಾಸಂಸ್ಥೆಯ ಉದ್ದೇಶಗಳು, ಗುಂಪಿನ ಸಹವಾಸದಿಂದ ಆಗುವ ಅನುಕೂಲಗಳು. 
ಅಧ್ಯಾಯ - ನಾಲ್ಕು
ವೃಂದಗತ ಸಮಾಜಕಾರ್ಯ ಬೆಳೆದುಬಂದ ಬಗೆ:- ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಭಾರತದಲ್ಲಿ.
 
ಅಧ್ಯಾಯ - ಐದು
ವೃಂದಗತ ಸಮಾಜಕಾರ್ಯದ ಸಿದ್ಧಾಂತಗಳು:- ಮನೋವಿಶ್ಲೇಷಣಾ ಸಿದ್ಧಾಂತ, ಕಲಿಕಾ ಸಿದ್ಧಾಂತ, ಕ್ಷೇತ್ರ ಸಿದ್ಧಾಂತ, ವ್ಯವಸ್ಥೆಯ ಸಿದ್ಧಾಂತ, ಸಂಘರ್ಷ ಸಿದ್ಧಾಂತ, ವಿನಿಮಯ ಸಿದ್ಧಾಂತ, ವೈಚಾರಿಕ ಆಯ್ಕೆಯ ಸಿದ್ಧಾಂತ, ವೃಂದಗತ ಸಮಾಜಕಾರ್ಯದ ನಮೂನೆಗಳು.
 
ಅಧ್ಯಾಯ - ಆರು
ವೃಂದಗತ ಸಮಾಜಕಾರ್ಯದ ತತ್ವಗಳು - ಸೂತ್ರಗಳು:- ಯೋಜನಾಬದ್ಧ ಗುಂಪಿನ ರಚನೆಯ ತತ್ತ್ವ, ವೃಂದಗಳು ನಿಶ್ಚಿತ ಉದ್ದೇಶವನ್ನು ಹೊಂದಿರುವ ತತ್ತ್ವ, ಕಾರ್ಯಕರ್ತ-ವೃಂದದ ಉದ್ದೇಶಪೂರ್ಣ ಸಂಬಂಧದ ತತ್ತ್ವ, ನಿರಂತರ ವ್ಯಕ್ತೀಕರಣದ ತತ್ತ್ವ, ಮಾರ್ಗದರ್ಶನಗೊಂಡ ವೃಂದದ ಅಂತರಕ್ರಿಯೆಯ ತತ್ತ್ವ, ವೃಂದದ ಪ್ರಜಾಸತ್ತೀಯ ಸ್ವನಿರ್ಣಯದ ತತ್ತ್ವ, ನಮ್ಯ ಕಾರ್ಯಾಚರಣೆಯ ವ್ಯವಸ್ಥೆಯ ತತ್ತ್ವ, ವೃಂದದ ಪ್ರಗತಿಗೆ ಅನುಗುಣವಾಗಿ ಕಾರ್ಯಕ್ರಮಗಳು, ಅನುಭವಗಳು ಬದಲಿಯಾಗಬೇಕು, ಸಂಪನ್ಮೂಲಗಳ ಬಳಕೆಯ ತತ್ತ್ವ, ಮೌಲ್ಯಮಾಪನಾ ತತ್ತ್ವ, ಗಿಸೆಲ ಕೊನೋಪ್ಕ ಅವರು ಪ್ರತಿಪಾದಿಸಿದ ಹದಿನಾಲ್ಕು ತತ್ತ್ವಗಳು, ಪ್ರೊ.ಸಿದ್ದಿಕಿಯವರು ಪ್ರತಿಪಾದಿಸಿದ ವೃಂದಗತ ಸಮಾಜಕಾರ್ಯದ ತತ್ತ್ವಗಳು.
 
ಅಧ್ಯಾಯ - ಏಳು
ವೃಂದ ಪ್ರಕ್ರಿಯೆಗಳು - ಪ್ರೇರಣಾಂಶಗಳು:- ಪಾರಸ್ಪರಿಕ ಕ್ರಿಯೆ (ಅಂತರ ಕ್ರಿಯೆ), ಸಂವಹನ, ಒಗ್ಗಟ್ಟು - ಸಂಸಕ್ತಿ, ಸಂಘರ್ಷ, ರಚನೆ-ವಿನ್ಯಾಸ, ನಾಯಕತ್ವ, ನಿರ್ಣಯಗಳನ್ನು ತೆಗೆದುಕೊಳ್ಳುವುದು, ರೂಢಿಯ ನಡವಳಿಕೆ ಮತ್ತು ವೃಂದದ ಸಂಸ್ಕೃತಿ, ಸಾಮಾಜಿಕ ನಿಯಂತ್ರಣ, ವೃಂದದ ಪ್ರಗತಿ - ವಿದ್ವಾಂಸರ ಅಭಿಪ್ರಾಯಗಳು, ವೃಂದದ ಪ್ರಕ್ರಿಯೆಗಳ - ಪ್ರೇರಕಾಂಶಗಳ ಮಾಪನ - ಮಾನದಂಡ.
 
ಅಧ್ಯಾಯ - ಎಂಟು   
ವೃಂದಗತ ಸಮಾಜಕಾರ್ಯದ ಪ್ರಕ್ರಿಯೆ:- ಹರ್ಲಿಫ್ ಟ್ರಕ್ಕರ್, ಸದಸ್ಯರಿಗೆ ವೃಂದ ಏಕೆ ಬೇಕು, ವೃಂದವನ್ನು ಅಭ್ಯಾಸ ಮಾಡುವ ವಿಧಾನ, ವೃಂದದ ಚಟುವಟಿಕೆಯ ಹಂತಗಳು, ಗಿಸೆಲ ಕೊನೊಪ್ಕ - ಪ್ರಕ್ರಿಯೆಯ ಅಂಶಗಳು, ಉಪಚಾರ ಪ್ರಕ್ರಿಯೆ, ಸಂಬಂಧಗಳು, ಸಂವಹನ, ಪರಿಸ್ಥಿತಿಯ ಸೃಷ್ಟಿ, ವೃಂದ ರಚನೆಯ ಪೂರ್ವಯೋಜನೆ, ರಚನೆ ಹೇಗಿರಬೇಕು, ಗಾತ್ರ, ಕಾಲಾವಧಿ, ಜಾಗ, ಆವರ್ತನ, ಉದ್ದೇಶಗಳ ನಿರ್ಣಯ, ಪ್ರಾರಂಭದ ಹಂತ, ಮಧ್ಯದ ಹಂತ, ಮೌಲ್ಯಮಾಪನ, ಮುಕ್ತಾಯದ ಹಂತ.
 
ಅಧ್ಯಾಯ - ಒಂಭತ್ತು
ವೃಂದಗತ ಸಮಾಜಕಾರ್ಯದ ಕೆಲವು ಪ್ರಮುಖ ಅಂಶಗಳು:- ಕಾರ್ಯಕ್ರಮದ ಸ್ವಭಾವ ಮತ್ತು ಉದ್ದೇಶ, ಸೇವಾ ಸಂಸ್ಥೆಯ ಪಾತ್ರ, ಅಭಿರುಚಿಗಳು - ಅಗತ್ಯಗಳು, ವೃಂದದ ಸಂಘಟನೆ, ಮಾರ್ಗದರ್ಶಿ ಅಂತರಕ್ರಿಯೆ, ಸಂಬಂಧಗಳು, ಪ್ರಾಯೋಜನೆ-ಕಾರ್ಯಕ್ರಮಗಳ ತತ್ತ್ವಗಳು, ಕಾರ್ಯಕರ್ತನ ಪಾತ್ರ, ಧನಾತ್ಮಕ-ವೃತ್ಯಾತ್ಮಕ ಸಂಬಂಧಗಳ ವಿಕಸನ, ಕಳಪೆ ಸಂಬಂಧಗಳು, ಮೇಲ್ವಿಚಾರಣೆ, ತತ್ತ್ವಗಳು, ನಿಯಂತ್ರಣ.
 
ಅಧ್ಯಾಯ - ಹತ್ತು
ವೃಂದಗತ ಸಮಾಜಕಾರ್ಯದ ತಂತ್ರಗಳು - ಕೌಶಲ್ಯಗಳು:- ವೃಂದ ಆಪ್ತ ಸಮಾಲೋಚನೆ, ಗುಂಪು ಚರ್ಚೆ, ವೃಂದ ನಿರ್ಣಯ, ಪಾತ್ರ ಅಭಿನಯ, ಕಾರ್ಯಕ್ರಮಗಳ ಬಳಕೆ, ವೈಯಕ್ತಿಕ ಸಭೆ, ಕೌಶಲ್ಯಗಳು, ಸಂವಹನದ ಪೂರಕ ಅಂಶಗಳು, ವಿಶ್ಲೇಷಣಾ ಕೌಶಲ, ಭಾಗವಹಿಸುವ ಕೌಶಲ, ಕೇಳುವಿಕೆ, ಅವಲೋಕನ, ವಿಮರ್ಶೆ, ತಿಳಿಗಂಪನ, ಸ್ವನಿಗ್ರಹ, ನಾಯಕತ್ವ.
 
ಅಧ್ಯಾಯ - ಹನ್ನೊಂದು     
 
ವೃಂದಗತ ಸಮಾಜಕಾರ್ಯದಲ್ಲಿ ದಾಖಲೀಕರಣ:- ದಾಖಲೀಕರಣಕ್ಕೆ ಕಾರಣಗಳು, ದಾಖಲೆಯ ವಿಷಯ, ಸದಸ್ಯರು, ಭಾಗವಹಿಸುವಿಕೆ, ಸ್ಥಿತಿಗತಿ, ಕಾರ್ಯಕರ್ತನ ಪಾತ್ರ, ಮೌಲ್ಯಮಾಪನ, ದಾಖಲಾತಿಯ ತತ್ತ್ವಗಳು.
 
ಅಧ್ಯಾಯ - ಹನ್ನೆರಡು
ವೃಂದಗತ ಸಮಾಜಕಾರ್ಯದಲ್ಲಿ ಕಾರ್ಯಕರ್ತನ ಪಾತ್ರ:- ಮಾರ್ಗದರ್ಶಕ, ದಳ್ಳಾಳಿ, ಸಂಧಾನಕಾರ, ಕ್ರಿಯಾವಾದಿ, ಶಿಕ್ಷಕ, ಆರಂಭಗಾರ, ಅಧಿಕಾರ ಕೊಡುವವನು, ಸಂಯೋಜಕ, ಸುಗಮಗಾರ, ಇತರೆ ಪಾತ್ರಗಳು.
 
ಅಧ್ಯಾಯ - ಹದಿಮೂರು      
ವೃಂದಗತ ಸಮಾಜಕಾರ್ಯದ ವಿವಿಧ ಕಾರ್ಯಕ್ಷೇತ್ರಗಳು:- ಬಾಲಕರು ಮತ್ತು ಹದಿವಯಸ್ಕರೊಂದಿಗೆ ವೃಂದಗತ ಸಮಾಜಕಾರ್ಯ, ಸಾಮಾನ್ಯ ಮಕ್ಕಳು, ಬೀದಿ ಮಕ್ಕಳು, ವಸತಿ ಸಂಸ್ಥೆಯ ಮಕ್ಕಳು, ಯುವಕರೊಂದಿಗೆ ವೃಂದಗತ ಸಮಾಜಕಾರ್ಯ, ವೃದ್ಧರೊಂದಿಗೆ ವೃಂದಗತ ಸಮಾಜಕಾರ್ಯ, ಮಹಿಳೆಯರೊಂದಿಗೆ ವೃಂದಗತ ಸಮಾಜಕಾರ್ಯ, ಅಸ್ವಸ್ಥರೊಂದಿಗೆ ವೃಂದಗತ ಸಮಾಜಕಾರ್ಯ.
 
ಅನುಬಂಧ
1.         ಆಕರ ಸಾಹಿತ್ಯ                       
2.         ಕಠಿಣ ಪದಗಳ ಅರ್ಥ
Picture

ಮುನ್ನುಡಿ
ವ್ಯಕ್ತಿಯು ವೃಂದಜೀವಿಯಾಗಿದ್ದು, ವೃಂದ ಜೀವನವು ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಾಥಮಿಕ ಸಾಮಾಜಿಕ ಸಂಸ್ಥೆಯಾದ ಕುಟುಂಬದಿಂದ ಪ್ರಾರಂಭವಾಗಿ ವ್ಯಕ್ತಿಯ ಜೀವನದ ಎಲ್ಲಾ ಹಂತದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ವೃಂದದೊಂದಿಗೆ ತನ್ನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಭಾಗವಹಿಸುತ್ತಿರುತ್ತಾನೆ. ಹಾಗಾಗಿ ವೃತ್ತಿಪರ ಸಮಾಜಕಾರ್ಯಕರ್ತರು ವೃಂದಗಳನ್ನು ಅಧ್ಯಯನ ಮಾಡುವುದು, ವೃಂದಗಳೊಂದಿಗೆ ಕಾರ್ಯ ನಿರ್ವಹಿಸುವುದು, ಅತ್ಯಂತ ಪ್ರಮುಖ ವಿಧಾನವಾಗಿದ್ದು ಇದರಲ್ಲಿ ಪರಿಣಿತಿಯನ್ನು ಪಡೆಯುವುದು ಅತ್ಯವಶ್ಯಕ.

ಭಾರತದಲ್ಲಿ ಸಮಾಜಕಾರ್ಯ ವೃತ್ತಿಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳು ಕಳೆದರೂ ಸಮಾಜಕಾರ್ಯ ವಿಷಯಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಬಾಷೆಯಲ್ಲಿ ಸಮಾಜಕಾರ್ಯ ಸಾಹಿತ್ಯದ ಅಭಾವ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ವೃತ್ತಿಪರ ಕಾರ್ಯಕರ್ತರಿಗೆ ತೊಡಕಾಗಿ ಪರಿಣಮಿಸಿದೆ. ಈ ತೊಡಕನ್ನು ನೀಗಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರನ್ನು ಬೆಸೆಯುವ ದೃಷ್ಟಿಯಿಂದ, ಡಾ. ಸಿ.ಆರ್ ಗೋಪಾಲ್ ಅವರ ಅನುಭವದ ಮೂಸೆಯಿಂದ ಹಲವಾರು ವೃತ್ತಿಪರ ಸಮಾಜಕಾರ್ಯ ಶಿಕ್ಷಣಕ್ಕೆ ಸಂಬಂಧಿಸಿದ ಹೊತ್ತಿಗೆಗಳು ಪ್ರಕಟಗೊಂಡಿವೆ. ಬಹಳ ಮುಖ್ಯವಾಗಿ ಕರ್ನಾಟಕದ ಪ್ರಾದೇಶಿಕ ಚಿಂತನೆಗಳನ್ನು ಸಮಾಜಕಾರ್ಯ ವೃತ್ತಿ ಶಿಕ್ಷಣದೊಂದಿಗೆ ಒರೆಹಚ್ಚುವ ಕಾರ್ಯವನ್ನು ಹಾಗೂ ಸ್ಥಳೀಯ ಸಮಾಜಕಾರ್ಯ ಅನ್ವಯಿಸುವಿಕೆಯನ್ನು ತಮ್ಮ ಕೃತಿಗಳ ಮೂಲಕ ಪ್ರಚುರಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರಸ್ತುತ ವೃಂದಗತ ಸಮಾಜಕಾರ್ಯ ಹೊತ್ತಿಗೆಯು, ಸ್ಥಳೀಯ ಸಮಾಜಕಾರ್ಯ ವೃತ್ತಿ ಶಿಕ್ಷಣಕ್ಕೆ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ. ಈ ಕೃತಿಯ ಮೂಲಕ ಡಾ. ಸಿ.ಆರ್. ಗೋಪಾಲ್ ಅವರ ವೃತ್ತಿಪರ ಅನುಭವಗಳನ್ನು ಸಮಾಜಕಾರ್ಯ ಶಿಕ್ಷಣದೊಂದಿಗೆ ಜೋಡಿಸಿ, ಸಮಾಜಕಾರ್ಯ ವೃತ್ತಿ ಹಾಗೂ ಶಿಕ್ಷಣದ ನಡುವೆ ಇದ್ದಂತಹ ಅಂತರವನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಕೃತಿಯ ಮೊದಲ ಅಧ್ಯಾಯದಲ್ಲಿ ಸಮಾಜಕಾರ್ಯದ ಸಂಕ್ಷಿಪ್ತ ಪರಿಚಯ, ಸಮಾಜಕಾರ್ಯದ ಮೂಲ ವಿಧಾನಗಳು, ಪೂರಕ ವಿಧಾನಗಳನ್ನು ಕುರಿತು ಚಚರ್ಿಸಲಾಗಿದೆ. ಮುಂದಿನ ಅಧ್ಯಾಯಗಳಲ್ಲಿ  ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು, ಪರಂಪರೆ, ಸಿದ್ಧಾಂತ, ತತ್ವಗಳು, ಪ್ರಕ್ರಿಯೆ, ತಂತ್ರಗಳು, ದಾಖಲೀಕರಣ, ಮೌಲ್ಯಮಾಪನ, ಸಮಾಜಕಾರ್ಯಕರ್ತರ ಪಾತ್ರ ಮತ್ತು ವೃಂದಗತ ಸಮಾಜಕಾರ್ಯದ ವಿವಿಧ ಕಾರ್ಯಕ್ಷೇತ್ರಗಳು ಹೀಗೆ ಸಮಗ್ರವಾಗಿ ವೃಂದಗತ ಸಮಾಜಕಾರ್ಯದ ಎಲ್ಲಾ ಪ್ರಕ್ರಿಯೆಗಳನ್ನೊಳಗೊಂಡಂತೆ ಈ ಕೃತಿಯನ್ನು ರಚಿಸಲಾಗಿದೆ.

ವೃತ್ತಿಪರ ಸಮಾಜಕಾರ್ಯದ ಪ್ರಶಿಕ್ಷಣಾರ್ಥಿಗಳು ತಮ್ಮ ವೃತ್ತಿ ತರಬೇತಿಯಲ್ಲಿ ಆಂತರಿಕ ಹಾಗೂ ಅಂತರ್ವೃಂದಗಳ ಅನುಭವಗಳನ್ನು ಪಡೆದು ವೃಂದದ ಚಲನಾತ್ಮಕ ಅಂಶಗಳು, ವೃಂದದ ನಡವಳಿಕೆ, ಹೆಚ್.ಬಿ. ಟ್ರಕ್ಕರ್ ರವರು ನೀಡಿರುವ ಹತ್ತು ವೃಂದಗತ ಸಮಾಜಕಾರ್ಯದ ಸೂತ್ರಗಳನ್ನು ಕ್ಷೇತ್ರಗಳಲ್ಲಿ ಅನ್ವಯಿಸಿ ವೃಂದಗತ ಸಮಾಜಕಾರ್ಯಕರ್ತರಾಗಿ ರೂಪುಗೊಳ್ಳುತ್ತಾರೆ, ಈ ರೂಪಗೊಳ್ಳುವ ಪ್ರಕ್ರಿಯೆಯಲ್ಲಿ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಯು ವೈಯಕ್ತಿಕ ಸ್ವ-ಪರಿಕಲ್ಪನೆಯಿಂದ ವೃತ್ತಿಪರ ಸ್ವ-ಪರಿಕಲ್ಪನೆಗೆ ಪರಿವರ್ತನೆಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತುತ ವೃಂದಗತ ಸಮಾಜಕಾರ್ಯ ಹೊತ್ತಿಗೆಯು ವೃಂದಗಳೊಡನೆ ಕಾರ್ಯ ನಿರ್ವಹಿಸಲು, ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ, ವೃತ್ತಿಪರರಿಗೆ ಹಾಗೂ ಅಧ್ಯಾಪಕರುಗಳಿಗೆ ಉತ್ತಮ ಆಕರ ಗ್ರಂಥವಾಗಿ ರೂಪಗೊಳ್ಳುವಲ್ಲಿ ಸಹಕಾರಿಯಾಗಲಿದೆ.

ವೃಂದಗತ ಸಮಾಜಕಾರ್ಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಇಷ್ಟು ದೊಡ್ಡ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಯಾವ ಗ್ರಂಥವೂ ಪ್ರಕಟಣೆಗೊಂಡಿಲ್ಲ. ಈ ಹೊತ್ತಿಗೆ ಸಂಶೋಧನಾತ್ಮಕ ಮತ್ತು ವಿವರಣಾತ್ಮಕ ಆಯಾಮಗಳನ್ನು ಒಳಗೊಂಡಿದೆ. ಈ ಪುಸ್ತಕವು ಸಮಾಜಕಾರ್ಯ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ.

ಇಂತಹ ಉಪಯುಕ್ತ ಹಾಗೂ ಮೌಲಿಕ ಕೃತಿಯನ್ನು ರಚಿಸಿರುವ ಡಾ. ಸಿ.ಆರ್. ಗೋಪಾಲ್‍ ರವರನ್ನು ಅಭಿನಂದಿಸುತ್ತೇನೆ. ಹಲವಾರು ಮೌಲಿಕ ಕೃತಿಗಳನ್ನು ಪ್ರಕಟಿಸುತ್ತಿರುವ ನಿರುತ ಪ್ರಕಾಶನದ ಅಮೂಲ್ಯ ಕೊಡುಗೆಗೆ ಶ್ರೀಯುತ ರಮೇಶ್‍ ರವರನ್ನು ಎಲ್ಲಾ ವೃತ್ತಿ ಸಮಾಜಕಾರ್ಯಕರ್ತರ ಪರವಾಗಿ ಅಭಿನಂದಿಸುತ್ತೇನೆ.
 
ಪ್ರೊ. ರಮೇಶ್ ಬಿ
ಕುಲಸಚಿವರು (ಮೌಲ್ಯಮಾಪನ), ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯ
0 Comments



Leave a Reply.

    Archives

    September 2020
    August 2020
    July 2020

    Categories

    All
    English Books
    Kannada Books


    List Your Product on Our Website

    RSS Feed


Site

  • Home
  • About Us
  • HR Blog
  • HR Books
  • Services
  • HR Job Openings
  • ​​List Your Product on Our Website
Vertical Divider

Major Services

  • Prevention of Sexual Harassment (PoSH)
  • Domestic Enquiry
  • Translations & Typing
  • Contract Labour
  • Printing
  • Publications
  • Payroll
  • ​Registration Services

Our Other Websites

  • ​www.hrkancon.com  
  • www.niratanka.org  
  • www.socialworkfootprints.org
Vertical Divider

Training Programmes

  • Certificate Course on Prevention of Sexual Harassment (PoSH)
  • Disciplinary Proceedings & Domestic Enquiry
  • Plan Your Retirement
  • ​Microsoft Excel (Corporate) Training

Contact Us

  • 080-23213710
  • +91-9980066890
  • +91-8310241136
  • +91-8073067542
  • MAIL-hrniratanka@mhrspl.com

ONLINE STORE
List Your Products in our Website 
Receive email updates on the new books & offers for the subjects of interest to you.
M&HR Solutions Private Limited
Copyright :MHRSPL-2020, website designed and developed by :www.socialworkfootprints.org