M&HR
  • HOME
  • About Us
  • HR Blog
  • POSH
    • Prevention of Sexual Harassment at Workplace (POSH) Online Training
    • Certificate course on Prevention of Sexual Harassment at Workplace (POSH)
    • Certificate course on Prevention of Sexual Harassment at Workplace (POSH)
    • POSH Training
  • Services
    • Domestic Enquiry
    • Payroll Services
  • HR Job Openings
  • HR Online Groups
  • Videos
  • Online Store
  • List Your Product on Our Website
  • SEARCH
  • Contact Us
    • Office Login
  • HOME
  • About Us
  • HR Blog
  • POSH
    • Prevention of Sexual Harassment at Workplace (POSH) Online Training
    • Certificate course on Prevention of Sexual Harassment at Workplace (POSH)
    • Certificate course on Prevention of Sexual Harassment at Workplace (POSH)
    • POSH Training
  • Services
    • Domestic Enquiry
    • Payroll Services
  • HR Job Openings
  • HR Online Groups
  • Videos
  • Online Store
  • List Your Product on Our Website
  • SEARCH
  • Contact Us
    • Office Login
M&HR

ಸಮುದಾಯ ಸಂಘಟನೆ

7/17/2020

0 Comments

 
Picture
ಲೇಖಕರು : ಡಾ. ಸಿ.ಆರ್. ಗೋಪಾಲ್
ಪುಟ : 490
ಪರಿವಿಡಿ
ಮುನ್ನುಡಿ
ಪ್ರಕಾಶಕರ ನುಡಿ
ಲೇಖಕರ ಪರಿಚಯ
ಪ್ರಸ್ತಾವನೆ - ಕೃತಜ್ಞತೆ
 
1. ಅಧ್ಯಾಯ-ಒಂದು
ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು.
 
2. ಅಧ್ಯಾಯ-ಎರಡು
ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು.
3. ಅಧ್ಯಾಯ-ಮೂರು, ಭಾಗ-ಒಂದು
ಗ್ರಾಮೀಣ ಸಮುದಾಯಗಳ ಸಮಸ್ಯೆಗಳ ಪಕ್ಷಿನೋಟ :- ಕೃಷಿ, ಭೂಮಿ, ಸುಧಾರಿತ ತಳಿಯ ಬೀಜ, ಗೊಬ್ಬರಗಳು, ಔಷಧಗಳು, ಯಾಂತ್ರೀಕರಣ, ಸಣ್ಣ ಹಿಡುವಳಿ, ಅಸ್ಥಿರ ಮಳೆ, ದಾಸ್ತಾನು, ಮಾರುಕಟ್ಟೆ, ಸಾರಿಗೆ-ಸಂಪರ್ಕ, ರೈತರ ಆತ್ಮಹತ್ಯೆ, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಮೂಢನಂಬಿಕೆ, ಅಸ್ಪೃಶ್ಯತೆ, ಸಾಂಪ್ರದಾಯಿಕತೆ ಮತ್ತು ಪ್ರತಿಗಾಮಿ ಧೋರಣೆ, ಜೀತದಾಳುಗಳ ಸಮಸ್ಯೆ, ಮದ್ಯಪಾನ, ನಿರುದ್ಯೋಗ, ಮಹಿಳಾ ಅಸಮಾನತೆ, ಸ್ತ್ರೀಯರ ಸಮಸ್ಯೆಗಳು, (ಲಿಂಗ ತಾರತಮ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ, ರಾಜಕೀಯ ಕ್ಷೇತ್ರ,) ನಾಗರೀಕ ಸೌಲಭ್ಯಗಳ ಕೊರತೆ, ನಿರಕ್ಷರತೆ, ಆರೋಗ್ಯ, ವಸತಿ, ಬಾಲಕಾರ್ಮಿಕರು, ಗ್ರಾಮೀಣ ರಸ್ತೆಗಳು, ಜನಸಂಖ್ಯಾ ಏರಿಕೆ, ವೃದ್ಧರ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರೋಗ್ಯದ ಸಮಸ್ಯೆಗಳು.
 
4. ಅಧ್ಯಾಯ-ಮೂರು, ಭಾಗ-ಎರಡು
ನಗರ ಸಮುದಾಯಗಳ, ಬುಡಕಟ್ಟು ಸಮುದಾಯಗಳ ಸಮಸ್ಯೆಗಳು :- ಜನಸಾಂದ್ರತೆ, ವಸತಿ, ಕೊಳೆಗೇರಿಗಳು, ನೀರು ಪೂರೈಕೆ ಮತ್ತು ಒಳ ಚರಂಡಿ ವ್ಯವಸ್ಥೆ, ಮಾಲಿನ್ಯತೆ, ಸಾಗಾಣಿಕೆ ಮತ್ತು ಸಂಚಾರ, ವಿದ್ಯುಚ್ಛಕ್ತಿ, ಅನಿಶ್ಚಿತತೆ, ವಿಹಾರಗಳಿಗೆ ಅನವಕಾಶ, ಬುಡಕಟ್ಟು ಸಮುದಾಯದ ಸಮಸ್ಯೆಗಳು, ಪ್ರತ್ಯೇಕತೆ, ಮೂಢನಂಬಿಕೆ, ಅಂಧಶ್ರದ್ಧೆ, ಸಾಂಸ್ಕೃತಿಕ ಭಿನ್ನತೆ, ಮದ್ಯಪಾನ, ಸಾಂಸ್ಕೃತಿಕ ಸಾಮಾನ್ಯೀಕರಣ, ವೃತ್ತಿಯಲ್ಲಿ ಬದಲಾವಣೆ ಮತ್ತು ಆರ್ಥಿಕ ಸ್ಥಿತಿಗತಿ, ಆರೋಗ್ಯ, ಬದಲಾಗುತ್ತಿರುವ ಬುಡಕಟ್ಟು ಸಮುದಾಯಗಳು.
 
5. ಅಧ್ಯಾಯ-ನಾಲ್ಕು, ಭಾಗ-ಒಂದು
ಸಮುದಾಯ ಸಂಘಟನೆಯ ಇತಿಹಾಸ :- ಬ್ರಿಟನ್ನಿನ ಸಮುದಾಯ ಸಂಘಟನೆಯ ಇತಿಹಾಸ-ಕಾರ್ಮಿಕ ಶಾಸನ 1343, ಬಡತನದ ಪರಿಹಾರ ಶಾಸನ 1531, ರಾಣಿ ಎಲಿಜಬೆತ್ ಅವರ ಬಡವರ ಕಾನೂನು ಸಂಹಿತೆ 1601, ದಾನ ಸಂಘಟನಾ ಸಮಾಜಗಳು, ಬೆವರಿಡ್ಜ್ ವರದಿ 1941, ಆಧುನಿಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು, ಬ್ರಿಟನ್ ದೇಶದ ಆಧುನಿಕ ಸಮುದಾಯ ಸಂಘಟನೆಯ ಪರಂಪರೆ, ಮೊದಲನೆ ಹಂತ 1880-1920, ಎರಡನೇ ಹಂತ 1920-1950, ಮೂರನೆಯ ಹಂತ 1950ರ ನಂತರ, ನಾಲ್ಕನೇ ಹಂತ.
​
ಅಮೇರಿಕದಲ್ಲಿ ಸಮುದಾಯ ಸಂಘಟನೆಯ ಪರಂಪರೆ-ದಾನ ಸಂಘಟನಾ ಕಾಲಾವಧಿ, ಸಮುದಾಯ ಕೋಶಗಳು ಮತ್ತು ಸಮಿತಿಗಳು, ಅಮೇರಿಕಾ ಸಮುದಾಯ ಸಂಘಟನಾ ಸಂಸ್ಥೆ, ಸಮುದಾಯ ಸಂಘಟನೆಯ ವಿಸ್ತಾರ ಮತ್ತು ವೃತ್ಯಾತ್ಮಕ ಅಭಿವೃದ್ಧಿ, ಎರಡನೇ ಜಾಗತಿಕ ಸಮರ ಮತ್ತು ಸಮುದಾಯ ಸಂಘಟನೆ, ನಾಲ್ಕನೆಯ ಹಂತ (1955ರ ನಂತರ), ಸಾಮಾಜಿಕ ಬದಲಾವಣೆಗೆ ಒತ್ತು, ಸಮುದಾಯ ಸಂಘಟನೆಯ ಪ್ರಚಲಿತ ಧೋರಣೆಗಳು.
 
6. ಅಧ್ಯಾಯ-ನಾಲ್ಕು, ಭಾಗ-ಎರಡು
ಭಾರತದಲ್ಲಿ ಸಮುದಾಯ ಸಂಘಟನೆಯ-ಅಭಿವೃದ್ಧಿಯ ಇತಿಹಾಸ :- ವೇದಕಾಲ, ದಾನ, ಬದಲಾದ ಪರಿಸ್ಥಿತಿ, ಋಗ್ವೇದದ ನಂತರದ ಕಾಲ, ಪಂಚ ಮಹಾಯಜ್ಞಗಳು, ಇಷ್ಟ-ಪೂರ್ತಗಳು, ಭಗವದ್ಗೀತೆಯಲ್ಲಿ, ಸ್ಮೃತಿಗಳು, ಮನುಸ್ಮೃತಿ ಇತ್ಯಾದಿ, ನೀತಿಗ್ರಂಥಗಳು, ಕೌಟಿಲ್ಯನ ನೀತಿಶಾಸ್ತ್ರ, ವಿದುರ ನೀತಿ, ಬೌದ್ಧ ಯುಗ, ಇಸ್ಲಾಂಯುಗ, ಪಾರ್ಸಿಯುಗ, ಜೈನಧರ್ಮ, ಯಹೂದಿ (ಹಿಬ್ರೂ ಧರ್ಮ), ಕ್ರೈಸ್ತ ಧರ್ಮ, ಧನ್ಯವಾಕ್ಯಗಳು, ಸಿಖ್‍ ಧರ್ಮ, ಸೂಫೀ ಧರ್ಮ, ಕನ್ಫ್ಯೂಶಿಯಸ್ ಧರ್ಮ, ಟಾವೋ ಧರ್ಮ, ಪಿಂಟೋಧರ್ಮ, ಬಹಾಯಿ ಧರ್ಮ, ಶರಣ ಸಾಹಿತ್ಯ, ದಾಸ ಸಾಹಿತ್ಯ, ಆಶ್ರಮಗಳು, ವಿದ್ಯಾಪೀಠಗಳು, ದೇವಸ್ಥಾನಗಳು.
 
7. ಅಧ್ಯಾಯ-ನಾಲ್ಕು, ಭಾಗ-ಮೂರು
ಆಧುನಿಕ ಕಾಲದ ಸಮಾಜ ಸುಧಾರಣೆ-ಸಮಾಜಕಾರ್ಯ-ಸಮುದಾಯ ಅಭಿವೃದ್ಧಿ ಯೋಜನೆಗಳು:- ಕ್ರೈಸ್ತ ಧರ್ಮ ಪ್ರಚಾರಕರು ಮತ್ತು ಸಮಾಜ ಸುಧಾರಣೆ, ಸಮಾಜ ಸುಧಾರಣಾ ಚಟುವಟಿಕೆಗಳು (1780-1880), ಸಮಾಜ ಸೇವಾ ಸಂಘಗಳು (1980-1900), ಸಮಾಜಕಾರ್ಯ ಚಟುವಟಿಕೆಗಳು (1900-1920), ಸಮಾಜಕಾರ್ಯ (1920-1937), ಗಾಂಧೀಜಿಯ ರಚನಾತ್ಮಕ ಕಾರ್ಯಕ್ರಮಗಳು, ಸಾಮಾಜಿಕ ಕಾನೂನುಗಳು, ಸಮುದಾಯ ಅಭಿವೃದ್ಧಿ ಯೋಜನೆಗಳು (ಪ್ರಯೋಗಗಳು), ಶ್ರೀನಿಕೇತನ ಯೋಜನೆ, ಸೇವಾಗ್ರಾಮ ಯೋಜನೆ, ಮಾರ್ತಾಂಡಂ ಯೋಜನೆ, ಗುರ್ಗಾಂವ್ ಯೋಜನೆ, ಬರೋಡಾ ಯೋಜನೆ, ನಿಲೋಖೇರಿ ಯೋಜನೆ, ಫಿರ್ಕಾ ಅಭಿವೃದ್ಧಿ ಯೋಜನೆ, ಎಟಾವ್ಹಾ ಯೋಜನೆ, ಗ್ರಾಮ ಪಂಚಾಯಿತಿಗಳು ಮತ್ತು ಸಮುದಾಯ ಸಂಘಟನೆ.
 
8. ಅಧ್ಯಾಯ-ಐದು
ಸಮುದಾಯ ಸಂಘಟನೆ-ಸಮುದಾಯ ಅಭಿವೃದ್ಧಿ :- ಸಮುದಾಯ, ಅವಶ್ಯಕತೆಗಳನ್ನು ಗುರುತಿಸುವುದು, ಆದ್ಯತಾಪಟ್ಟ ತಯಾರಿಕೆ, ಸಂಪನ್ಮೂಲಗಳ ಕ್ರೂಢೀಕರಣ, ಕೆಲಸ ಮಾಡಲು ಭರವಸೆಯನ್ನು ಮೂಡಿಸಿಕೊಳ್ಳುವುದು, ನಿರ್ಣಯ ತೆಗೆದುಕೊಳ್ಳುವುದು, ಕಾರ್ಯಕ್ರಮಗಳ ಅನುಷ್ಠಾನ, ಸಹಯೋಗ-ಸಹಕಾರಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು, ಹೊಸ ಪದ್ಧತಿಯನ್ನು ರೂಪಿಸಿಕೊಳ್ಳುವುದು, ಸಮುದಾಯ ಸಂಘಟನೆ ಒಂದು ಪ್ರಜ್ಞಾಪೂರ್ಣ ಪ್ರಕ್ರಿಯೆ, ಇತರೆ ವ್ಯಾಖ್ಯೆಗಳು, ಅವುಗಳ ವಿವರಣೆ, ಸಮುದಾಯ ಸಂಘಟನೆ ಮತ್ತು ಸಮಾಜಕಾರ್ಯದ ಇತರೆ ವಿಧಾನಗಳಿಗಿರುವ ವ್ಯತ್ಯಾಸ, ಆಡಳಿತ ಮತ್ತು ಸಮುದಾಯ ಸಂಘಟನೆ, ಸಮುದಾಯ ಸಂಘಟನೆ ಹಾಗೂ ಸಮುದಾಯ ಅಭಿವೃದ್ಧಿ, ಈ ಪರಿಕಲ್ಪನೆಗಳ ವ್ಯತ್ಯಾಸಗಳು.
 
9. ಅಧ್ಯಾಯ-ಆರು
ಸಮುದಾಯ ಸಂಘಟನೆಯ ಮಾದರಿಗಳು :- ನಿಶ್ಚಿತ ಉದ್ದೇಶವುಳ್ಳ ದೃಷ್ಟಿಕೋನ, ವಿವಿಧೋದ್ದೇಶ ದೃಷ್ಟಿಕೋನ, ಪ್ರಕ್ರಿಯೆ ಉದ್ದೇಶಿತ ದೃಷ್ಟಿಕೋನ, ಸಮುದಾಯಗಳಲ್ಲಿ ಕೆಲಸ ಮಾಡುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು, ಸ್ಥಳೀಯ ಅಭಿವೃದ್ಧಿ ಮಾದರಿ-ನೆರೆಹೊರೆ ಅಭಿವೃದ್ಧಿ ಮಾದರಿ, ಸಾಮಾಜಿಕ ಯೋಜನಾ ಮಾದರಿ, ಸಾಮಾಜಿಕ ಕಾರ್ಯಾಚರಣೆ ಮಾದರಿ, ವ್ಯತ್ಯಾಸಗಳು, ಸೌಲ್ ಅಲೆನ್ಸ್ಕೀ ಮಾದರಿ, ಮಾದರಿಯ ಪ್ರಮುಖ ಅಂಶಗಳು.
 
10. ಅಧ್ಯಾಯ-ಏಳು
ಸಮುದಾಯ ಸಂಘಟನೆಯ ಗ್ರಹಿಕೆಗಳು, ವೈಶಿಷ್ಟ್ಯಗಳು, ಧ್ಯೇಯೋದ್ದೇಶಗಳು, ವ್ಯಾಪ್ತಿ ಇತ್ಯಾದಿ :- ಮೂಲ ಗ್ರಹಿಕೆಗಳು, ಸಮುದಾಯದ ಮೌಲ್ಯಗಳು, ಆಧುನಿಕ ಸಮಾಜದ ಸಮಸ್ಯೆಗಳು-ಸವಾಲುಗಳು, ಸಮುದಾಯಗಳಲ್ಲಿ ಗುಂಪುಗಳ-ಉಪಗುಂಪುಗಳ ಬಲಾಢ್ಯತೆ, ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಸಮುದಾಯದ ಸದಸ್ಯರು ಸಮರ್ಥರು ಎಂಬ ನಂಬಿಕೆ, ಜನರು ಬದಲಾವಣೆಯನ್ನು ವಿರೋಧಿಸುವುದಿಲ್ಲ, ಬದಲಾವಣೆ ತರುವಲ್ಲಿ ಸದಸ್ಯರು ಉತ್ಸುಕರಾಗಿರುತ್ತಾರೆ, ಬದಲಾವಣೆ ಸ್ವ ನಿರ್ಣಯ ಆಗಿರಬೇಕು, ಸಮುದಾಯಕ್ಕೆ ಸಹಾಯ-ನೆರವು, ಸಮುದಾಯದಲ್ಲಿ ಬಾಂಧವ್ಯ, ಆಂತರಿಕ-ಬಾಹ್ಯ ಸಂಪನ್ಮೂಲಗಳು, ಸಮಗ್ರ ಧೋರಣೆ, ಪ್ರಜಾಪ್ರಭುತ್ವದ ತಳಹದಿ, ಸಮುದಾಯ ಸಂಘಟನೆಯ ಪ್ರಮುಖ ವೈಶಿಷ್ಟ್ಯಗಳು, ಸಂಘಟನೆ ಎಲ್ಲೆಲ್ಲಿ ಆಗಬೇಕು, ಸಂಘಟನೆಯನ್ನು ಯಾರು ಮಾಡಬೇಕು. ಸಮುದಾಯ ಸಂಘಟನೆಯ ಗುರಿ, ಧ್ಯೇಯೋದ್ದೇಶಗಳು, ಸಮುದಾಯ ಸಂಘಟನೆಯ ವ್ಯಾಪ್ತಿ, ಸಮುದಾಯ ಸಂಘಟನೆ ಸಮಾಜಕಾರ್ಯದ ಒಂದು ವಿಧಾನ.
 
11. ಅಧ್ಯಾಯ-ಎಂಟು
ಸಮುದಾಯ ಸಂಘಟನೆಯ ತತ್ತ್ವಗಳು :- ಅತೃಪ್ತಿ-ಅಸಮಾಧಾನ, ಅತೃಪ್ತಿಯನ್ನು ಸಂಸ್ಥೆ ಸ್ಥಾಪಿಸಲು, ಯೋಜನೆ ರೂಪಿಸಲು, ಕಾರ್ಯರೂಪಕ್ಕೆ ತರಲು ಉಪಯೋಗಿಸಬೇಕು, ಅತೃಪ್ತಿಯು ಸಾರ್ವತ್ರಿಕವಾಗಿರಬೇಕು. ನಾಯಕರನ್ನು ತೊಡಗಿಸಿಕೊಳ್ಳಬೇಕು, ಸಂಸ್ಥೆಗೆ ಧ್ಯೇಯೋದ್ದೇಶಗಳು, ಗುರಿಗಳು ಮತ್ತು ವಿಧಾನಗಳು ಇರಬೇಕು, ಕೆಲವು ಕಾರ್ಯಕ್ರಮಗಳು ಭಾವನಾತ್ಮಕ ಅಂಶಗಳನ್ನು ಒಳಗೊಂಡಿರಬೇಕು, ಸಮುದಾಯದಲ್ಲಿರುವ ಸದ್ಭಾವನೆಗಳನ್ನು ಸಂಘಟನೆಗೆ ಬಳಸಿಕೊಳ್ಳಬೇಕು. ಚೈತನ್ಯಪೂರ್ಣ ಮತ್ತು ಪ್ರಭಾವಯುತವಾದ ಸಂಪರ್ಕವನ್ನು ಅಭಿವೃದ್ಧಿಪಡಿಸಬೇಕು, ಗುಂಪುಗಳನ್ನು ಬೆಂಬಲಿಸಬೇಕು-ಪ್ರಭಾವಶಾಲಿಯಾಗಲು ಅನುವು ಮಾಡಿಕೊಡಬೇಕು, ಪರಿಸ್ಥಿತಿಗೆ ತಕ್ಕಂತೆ ಕಾರ್ಯವೈಖರಿಯ ಗತಿ, ನಾಯಕರನ್ನು ಬೆಳೆಸುವಲ್ಲಿ ಸಂಸ್ಥೆಯ ಪಾತ್ರ, ಸಂಸ್ಥೆ ಸಮುದಾಯದಲ್ಲಿ ತನ್ನ ಶಕ್ತಿ, ಸ್ಥಿರತೆ, ಗೌರವಗಳನ್ನು ಹೆಚ್ಚಿಸಿಕೊಳ್ಳಬೇಕು, ಆರ್ಥರ್ ಡನ್ಹ್ಯಾಮ್ ಅವರ ಸೂತ್ರಗಳು, ಪ್ರಜಾಪ್ರಭುತ್ವದ ತಳಹದಿ, ಸ್ಥಳೀಯ ಜನರಿಂದ ಬೆಂಬಲದ ನಿಯಂತ್ರಣ, ಜನರು ತೊಡಗಿಕೊಳ್ಳುವಿಕೆ, ಸಮಾಜಕಲ್ಯಾಣ ಸಂಸ್ಥೆಗಳು, ಕಾರ್ಯಕ್ರಮಗಳು, ನಾಗರೀಕರ ಕಲ್ಪನೆ, ಸ್ವಸಹಾಯ ಇತ್ಯಾದಿ ಅಂಶಗಳು, ಸಮಾಜಕಲ್ಯಾಣ ಕಾರ್ಯಕ್ರಮಗಳು, ಮ್ಯಾಕ್ನೀಯಲ್, ಪ್ರೊ. ಸಿದ್ಧಿಕಿಯವರು ಪ್ರತಿಪಾದಿಸಿದ ತತ್ತ್ವಗಳು.
 
12. ಅಧ್ಯಾಯ-ಒಂಭತ್ತು
ಸಮುದಾಯ ಸಂಘಟನೆಯ ಪ್ರಕ್ರಿಯೆ :- ಸಮುದಾಯ ಭಾವೈಕ್ಯತೆ, ಸಾಮಾಜಿಕ ರಚನೆ, ಯೋಜನೆಯ ಅವಶ್ಯಕತೆಗಳು, ಸಮಸ್ಯೆಯ ಸ್ವರೂಪ, ಸಮಸ್ಯೆಗೆ ಪರಿಹಾರವನ್ನು ನಿರ್ಣಯಿಸುವುದು, ಯೋಜನೆಯ ಅನುಷ್ಠಾನ, ಜನ-ಸಾಮಾನ್ಯರ ಭಾಗವಹಿಸುವಿಕೆ, ಸಮುದಾಯದ ಚಿತ್ರಣ, ಕಾರ್ಯಕ್ರಮ ಯೋಜನೆ, ಆಡಳಿತ ಮತ್ತು ಯೋಜನಾ ನಿರ್ವಹಣೆ, ಹೊಣೆಗಾರಿಕೆ ನಿರ್ವಹಣೆ, ಮೌಲ್ಯಮಾಪನ, ಮೌಲ್ಯಗಳ ಬಗ್ಗೆ ವಿವಾದ.
 
13. ಅಧ್ಯಾಯ-ಹತ್ತು
ಸಮುದಾಯ ಸಂಘಟನೆಯ ಪದ್ಧತಿಗಳು-ವಿಧಾನಗಳು-ಕಾರ್ಯತಂತ್ರಗಳು:- ಪ್ರೊ. ಆರ್ಥರ್ ಡನ್ಹ್ಯಾಮ್, ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಅವರು ಪ್ರತಿಪಾದಿಸಿದ ವಿಭಾಗಗಳು-ತಂತ್ರಗಳು, ಯೋಜನೆ-ಕಾರ್ಯಕ್ರಮಗಳು, ಮಾಹಿತಿ ಸಂಗ್ರಹಣೆ, ಸಂಶೋಧನೆ, ವಿಧಾನಗಳು, ಸಾಮಾಜಿಕ ಸಮೀಕ್ಷೆ, ವ್ಯತ್ಯಾಸಗಳು, ಸಮೀಕ್ಷೆಯ ಹಂತಗಳು, ಸಂದರ್ಶನ, ಪ್ರಶ್ನಾವಳಿ, ಅವಲೋಕನ, ಆಕರಗಳು, ಪ್ರಾಥಮಿಕ-ಅನುಷಂಗಿಕ, ಸಾರ್ವಜನಿಕ ದಾಖಲೆಗಳು, ವಿಶ್ಲೇಷಣೆ, ಪರಿಷ್ಕರಣ, ಸಂಕೇತಿಕರಣ ಮತ್ತು ಕೋಷ್ಟಕೀಕರಣ, ಮೌಲ್ಯ ನಿರ್ಣಯ, ವ್ಯಾಖ್ಯಾನ, ವಿವರಣೆ, ವರದಿ ತಯಾರಿಸುವುದು, ಯೋಜನೆಯನ್ನು ರೂಪಿಸುವುದು, ಸಮಾಜಕಲ್ಯಾಣ ಕಾರ್ಯಕ್ರಮ, ಸಂಯೋಜನೆ ಮತ್ತು ಸಮೀಕರಣ, ಸಮಾಲೋಚನೆ, ಸಲಹೆ, ಮಾತುಕತೆ-ಸಂಧಾನ, ಸಂಘಟನೆ ಮತ್ತು ವ್ಯವಸ್ಥೆ, ಗುಂಪಿನ ಪ್ರೇರಕ ಶಕ್ತಿಗಳು, ಮಾನವ ಸಂಪನ್ಮೂಲ ಯೋಜನೆ, ಸಮುದಾಯ ಸಂಘಟನೆ ಮತ್ತು ಕಾನೂನು ಕ್ಷೇತ್ರ, ಸಂಪನ್ಮೂಲಗಳ ಕ್ರೂಢೀಕರಣ, ವೈವಿಧ್ಯತೆ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಿತಿಗಳು, ಸರಾಗಗೊಳಿಸುವಿಕೆ, ಕಥೆ ಹೇಳುವುದು, ಸೂಕ್ಷ್ಮ ಅಂತರ್ದೃಷ್ಟಿ, ಸಮುದಾಯದ ಚಿತ್ರಣ ತಂತ್ರಗಳು, ಕ್ಷೇತ್ರ ಶಕ್ತಿ ವಿಶ್ಲೇಷಣೆ, ಚುಕ್ಕಿ ಪದ್ಧತಿ, ವಿರುದ್ಧ ಗೋಡೆಗಳು, ರೂಪಾಯಿ ಹಂಚಿಕೆ.
 
14. ಅಧ್ಯಾಯ-ಹನ್ನೊಂದು
ಸಮುದಾಯ ಸಂಘಟಕನ ಕೌಶಲ, ಪಾತ್ರ ಮತ್ತು ಮನೋಭಾವ :- ಪ್ರೊ. ಆರ್ಥರ್ ಡನ್ಹ್ಯಾಮ್ (ಅರ್ಲಿನ್ ಜಾನ್ಸನ್), ಮ್ಯಾಕ್ ಮೋಹನ್, ಪ್ರೊ. ಸಿದ್ಧಿಕಿಯವರು ಪ್ರತಿಪಾದಿಸಿರುವ ಕೌಶಲಗಳು, ಸಮುದಾಯ ಸಂಘಟಕನ ಪಾತ್ರ, ಮಾರ್ಗದರ್ಶಕ, ಪ್ರೋತ್ಸಾಹಕ, ಪರಿಣತನ ಪಾತ್ರ, ಶಿಕ್ಷಕ, ವಕೀಲ (ಸಮರ್ಥನೆಕಾರ), ಸಹಯೋಗಿ, ಸುಗಮಗಾರ, ಸಾಮಾಜಿಕ ಚಿಕಿತ್ಸೋಪಚಾರಕ, ಇತರೆ ಪಾತ್ರಗಳು, ಪಾತ್ರ ನಿರ್ವಹಣೆ, ಸಂಘಟಕನ ಮನೋಭಾವ.
 
15. ಅಧ್ಯಾಯ-ಹನ್ನೆರಡು
ಗಾಂಧಿ ಪ್ರಣೀತ ಅಭಿವೃದ್ಧಿ ಮಾರ್ಗ-ಸರ್ವೋದಯ :- ಪೀಠಿಕೆ, ಗಾಂಧೀಜಿಯ ಸಾಮಾಜಿಕ ಸಿದ್ಧಾಂತ, ಗಾಂಧೀಜಿ ಪ್ರತಿಪಾದಿಸಿದ ಸಮಾಜಕಾರ್ಯ ಯೋಜನೆ, ಹದಿನೆಂಟು ರಚನಾತ್ಮಕ ಕಾರ್ಯಕ್ರಮಗಳ ತತ್ತ್ವಗಳು, ಸ್ವರಾಜ್ಯ, ಸ್ವದೇಶಿ, ಸ್ವಾವಲಂಬನ, ಸ್ವಾನುಭವ, ಸ್ವಾಧ್ಯಾಯ, ರಚನಾತ್ಮಕ ಕಾರ್ಯಕ್ರಮಗಳು, ಕೋಮು ಸೌಹಾರ್ದತೆ, ಅಸ್ಪೃಶ್ಯತಾ ನಿವಾರಣೆ, ಮಧ್ಯಪಾನ ನಿಷೇಧ, ಖಾದಿ, ಗ್ರಾಮೋದ್ಯೋಗ, ಗ್ರಾಮ ನೈರ್ಮಲ್ಯ/ಸ್ವಚ್ಛತೆ, ಮೂಲ ಶಿಕ್ಷಣ, ವಯಸ್ಕರ ಶಿಕ್ಷಣ, ಮಹಿಳೆಯರು, ಸಾರ್ವಜನಿಕ ಆರೋಗ್ಯ ಶಿಕ್ಷಣ, ಪ್ರಾಂತೀಯ ಭಾಷೆಗಳು, ಸಂಸ್ಕೃತದ ಸ್ಥಾನ, ರಾಷ್ಟ್ರಭಾಷೆ/ರಾಷ್ಟ್ರಭಾಷೆಗಳು, ಆರ್ಥಿಕ ಸಮಾನತೆ, ರೈತರ ಅಭಿವೃದ್ಧಿ, ಕಾರ್ಮಿಕರ ಕಲ್ಯಾಣ, ಮುಷ್ಕರಗಳು, ಆದಿವಾಸಿಗಳ ಪ್ರಗತಿ, ರೋಗಿಗಳ ಶುಶ್ರೂಷೆ, ವಿದ್ಯಾರ್ಥಿಗಳ ಬೆಳವಣಿಗೆ, ಜಾನುವಾರು ಅಭಿವೃದ್ಧಿ, ರಚನಾತ್ಮಕ ಕಾರ್ಯಕ್ರಮಗಳಿಂದ ಸರ್ವೋದಯದೆಡೆಗೆ, ಸರ್ವೋದಯದ ವೈಶಿಷ್ಟ್ಯಗಳು, ಸರ್ವೋದಯದ ಕಾರ್ಯವಿಧಾನ, ಸರ್ವೋದಯ ಕಾರ್ಯಕರ್ತ, ಏಕಾದಶ ವ್ರತಗಳು, ಸರ್ವೋದಯ ಕಾರ್ಯಕರ್ತನ ಅರ್ಹತೆಗಳು.
 
ಅನುಬಂಧಗಳು
1. ಆಕರ ಗ್ರಂಥಗಳು
2. ಸಂಕ್ಷಿಪ್ತ ಶಬ್ದಕೋಶ

ಮುನ್ನುಡಿ
ಶಿಕ್ಷಣದ ಸರ್ವಶ್ರೇಣಿಗಳಲ್ಲಿಯೂ ನಾಡ ಭಾಷೆ, ರಾಜ್ಯ ಭಾಷೆ ಶಿಕ್ಷಣದ ಮಾಧ್ಯಮವಾಗಬೇಕೆಂಬುದು ಶಿಕ್ಷಣದ ಧ್ಯೇಯೋದ್ದೇಶಗಳು ಹೆಚ್ಚು ಸಫಲವಾಗುವುದಕ್ಕೆ ತುಂಬಾ ಅಗತ್ಯವಾದುದು. ಕಸ್ತೂರಿ ಕನ್ನಡ ಭಾಷೆಯಲ್ಲಿ ಯಾವ ವಿಷಯವನ್ನೇ ಆಗಲಿ, ಸುಲಲಿತವಾಗಿ, ಸುಲಭಗ್ರಾಹ್ಯವಾಗಿ, ಪರಿಣಾಮಕಾರಿಯಾಗಿ ಖಂಡಿತವಾಗಿಯೂ ಬರೆಯಬಹುದಾಗಿದೆ. ಇತ್ತೀಚೆಗೆ ಈ ನಿಟ್ಟಿನಲ್ಲಿ ಗುರುತರ ಪ್ರಯತ್ನಗಳು ವ್ಯಾಪಕವಾಗಿ ಆಗುತ್ತಿರುವುದು ಒಂದು ಶುಭ ಸೂಚನೆಯಾಗಿರುವುದು. ಶಾಸ್ತ್ರಗ್ರಂಥಗಳನ್ನು ಸುಲಲಿತ ಶೈಲಿಯಲ್ಲಿ ಸಾಕಷ್ಟು ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ಬರೆಯುವುದರಲ್ಲಿ ಸಿದ್ಧಹಸ್ತರಾದ, ನಿಜವಾದ ಅರ್ಥದಲ್ಲಿ ಒಬ್ಬ ಪ್ರತಿಭಾವಂತ ಪ್ರಾಧ್ಯಾಪಕರೂ ಯಶಸ್ವೀ ಲೇಖಕರೂ ಆದ ಸನ್ಮಾನ್ಯ ಶ್ರೀ ಡಾ|| ಸಿ.ಆರ್. ಗೋಪಾಲ್‍ರವರು `ಸಮಾಜಕಾರ್ಯಕ್ಕೆ ಸಂಬಂಧಿಸಿದ ಈ ಮೌಲಿಕ ಕೃತಿಯನ್ನು ಕನ್ನಡದಲ್ಲಿ ಬರೆದು ಪ್ರಕಟಿಸುತ್ತಿರುವುದು ತುಂಬಾ ಸಂತೋಷಕರವಾದ ಸಂಗತಿಯಾಗಿರುವುದು.

ಪದವಿಪೂರ್ವ, ಪದವಿ, ಸ್ನಾತಕೋತ್ತರ ತರಗತಿಗಳಲ್ಲಿ ವಿಷಯಗಳ ಆಯ್ಕೆಯಲ್ಲಿ ಸರಿಯಾದ ಪುಸ್ತಕ, ಸಮರ್ಪಕ ಹಾಗೂ ಪರಿಣಾಮಕಾರಿಯಾದ ಬೋಧನೆ, ಭವಿಷ್ಯದಲ್ಲಿ ಆ ವಿಷಯದಿಂದಾಗಬಹುದಾದ ಪ್ರಯೋಜನಗಳು ಹೆಚ್ಚು ಪ್ರಭಾವ ಬೀರುತ್ತವೆ. ಈ ಮಾತು ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆಯೂ ಅನ್ವಯವಾಗುತ್ತದೆ.

ನಮ್ಮ ಭಾರತ ದೇಶಕ್ಕೆ `ಸಮಾಜಕಾರ್ಯದ ಸಿದ್ಧಾಂತಗಳು, ತತ್ವಾದರ್ಶಗಳು, ಪದ್ಧತಿಗಳು ಮೊದಲಾದವು ಬಂದದ್ದು ಬೆಳೆದದ್ದು ಇಪ್ಪತ್ತನೇ ಶತಮಾನದ ನಾಲ್ಕನೇ ದಶಕದಲ್ಲಿ. ಪ್ರಾರಂಭದಲ್ಲಿ ಮುಂಬಯಿ ಮಹಾನಗರದಲ್ಲಿ ಸಮಾಜ ವಿಜ್ಞಾನಗಳ ಟಾಟಾ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಆನಂತರ ಹಂತಹಂತವಾಗಿ ಬೆಳೆಯುತ್ತಾ ಬಂದು, ಪ್ರಸ್ತುತ ಭಾರತ ದೇಶದ ಬಹುತೇಕ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮೊದಲಾದವು ಸಮಾಜಕಾರ್ಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸುತ್ತಿವೆ. ಅದರ ಫಲರೂಪವಾಗಿ ಸಹಸ್ರಾರು ಸಮಾಜಕಾರ್ಯ ಪ್ರಶಿಕ್ಷಕರು ಹಾಗೂ ಸಮಾಜಕಾರ್ಯ ಕಾರ್ಯಕರ್ತರು, ಸಮಾಜದ ಒಳಿತಿಗಾಗಿ ಅಪಾರವಾಗಿ ಶ್ರಮಿಸುತ್ತಿದ್ದಾರೆ. ಪ್ರಸ್ತುತವಾಗಿ ಸಮಾಜಕಾರ್ಯ ಒಂದು ವೃತ್ತಿಯೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಸಿದ್ಧಾಂತಗಳು, ತತ್ವಾದರ್ಶಗಳು, ಪದ್ಧತಿಗಳು, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡಂತಹ ಪರಿಕಲ್ಪನೆಗಳು ಮತ್ತು ಪದ್ಧತಿಗಳು. ಹಾಗೆ ಹೇಳಿದ ಮಾತ್ರಕ್ಕೇ ನಮಗೆ ನಮ್ಮದೇ ಆದ ಸಮಾಜಕಾರ್ಯ ಸಿದ್ಧಾಂತಗಳು, ತತ್ವಾದರ್ಶಗಳು, ಇತ್ಯಾದಿಗಳು ಇಲ್ಲವೆಂದು ಭಾವಿಸಲಾಗದು. ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯಲ್ಲಿ ಸಮಾಜಕಾರ್ಯ ಪರಿಕಲ್ಪನೆ, ಸಿದ್ಧಾಂತಗಳು ಇದ್ದೇ ಇವೆ. ಅವುಗಳನ್ನು `ಸಮಾಜಕಾರ್ಯ ಎಂಬ ಪರಿಕಲ್ಪನೆಯಡಿ ಪರಿಗಣಿಸದಿದ್ದರೂ ಸಹ, ಸಮಾಜಸೇವೆ, ಲೋಕನೀತಿ, ಲೋಕಕಲ್ಯಾಣ, ಲೋಕದ ಲೇಸು, ಜನೋಪಯೋಗಿ ಕೆಲಸಗಳು, ಧರ್ಮಕಾರ್ಯಗಳು ಮುಂತಾದ ವಿವಿಧ ಶೀರ್ಷಿಕೆಗಳಡಿಯಲ್ಲಿ ಕೆಲಸಕಾರ್ಯಗಳು ಅನೂಚಾನವಾಗಿ ನಡೆದುಕೊಂಡು ಬಂದಿರುವುದನ್ನು ವ್ಯಾಪಕವಾಗಿ ಗುರುತಿಸಬಹುದಾಗಿದೆ. ಅವುಗಳನ್ನು ವಸ್ತುನಿಷ್ಠವಾಗಿ ಹೆಕ್ಕಿ ತೆಗೆದು, ಪ್ರಸ್ತುತ ಸಂದರ್ಭಗಳಿಗನುಗುಣವಾಗಿ ಬಳಸಿಕೊಳ್ಳಬೇಕಷ್ಟೆ.

ಇಂದಿನ ಸಮಾಜಕಾರ್ಯ ಪ್ರಶಿಕ್ಷಕರುಗಳಲ್ಲಿ ಒಂದು ಪ್ರಮುಖ ಕೊರಗಿದೆ. ಈ ಅನುಷ್ಠಾನಗೊಳ್ಳುತ್ತಿರುವ ಸಿದ್ಧಾಂತಗಳು, ಪದ್ಧತಿಗಳು ಮುಂತಾದವುಗಳು ಹೊರದೇಶಗಳಿಂದ ಆಮದು ಮಾಡಿಕೊಂಡವುಗಳೇ. ಭಾರತೀಯ ಸಂಸ್ಕೃತಿ ಪ್ರಧಾನ ಸಮಾಜಕ್ಕೆ ಅವುಗಳನ್ನು ಅನ್ವಯಿಸುವುದು ಕಷ್ಟವಾಗುತ್ತದೆ. ನಮಗೆ ಮತ್ತು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವಂತಹ ತತ್ವಾದರ್ಶಗಳು ನಮಗೆ ಬೇಕು. ಅಂತಹ ದೇಶೀಯ ಮೂಲದ ಸಿದ್ಧಾಂತಗಳನ್ನು ಹೆಕ್ಕಿ ತೆಗೆಯಬೇಕು.

ಸಮಾಜಕಾರ್ಯ ಪ್ರಶಿಕ್ಷಕರು ಮತ್ತೊಂದು ಗುರುತರ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಅದು ಸಮಾಜಕಾರ್ಯ ಸಾಹಿತ್ಯಕ್ಕೆ ಸಂಬಂಧಿಸಿದ್ದು. ಪ್ರಸ್ತುತ ಸಮಾಜಕಾರ್ಯ ಕ್ಷೇತ್ರದಲ್ಲಿ ಸಾಹಿತ್ಯದ ಕೊರತೆಯಿದೆ. ಈ ನಿಟ್ಟಿನಲ್ಲಿ ಪಾಶ್ಚಿಮಾತ್ಯ ವಿದ್ವಾಂಸರುಗಳು ಬರೆದ ಕೆಲವೇ ಪುಸ್ತಕಗಳು ಆಕರ ಗ್ರಂಥಗಳೆಂಬುದಾಗಿ ಪರಿಗಣಿಸಲ್ಪಟ್ಟಿವೆ. ಹಾಗೆಯೇ ಭಾರತೀಯ ವಿದ್ವಾಂಸರುಗಳು ಬರೆದಿರುವ ಕೆಲವು ಗ್ರಂಥಗಳು ಅಭ್ಯಾಸಕ್ಕೆ ಲಭ್ಯವಿವೆ. ಆದಾಗ್ಯೂ ಸಮಾಜಕಾರ್ಯದ ವಿವಿಧ ಪದ್ಧತಿಗಳನ್ನು ಅತ್ಯಂತ ಸಮರ್ಪಕವಾಗಿ ಪರಿಚಯಿಸುವ ಪುಸ್ತಕಗಳು ಕಡಿಮೆ ಎಂದೇ ಹೇಳಬೇಕಾಗಿದೆ. ಕನ್ನಡ ಭಾಷೆಯಲ್ಲಂತೂ ಸಮಾಜಕಾರ್ಯ ಪರಾಮರ್ಶನ ಗ್ರಂಥಗಳು ತುಂಬಾ ವಿರಳ.
ಮೇಲೆ ಪ್ರಸ್ತಾಪಿಸಲಾಗಿರುವ ಎರಡೂ ಕೊರತೆಗಳನ್ನು ಮಿತ್ರರಾದ ಡಾ|| ಸಿ.ಆರ್. ಗೋಪಾಲ್‍ರವರು ಅಪಾರ ಆಸಕ್ತಿ ಹಾಗೂ ಪರಿಶ್ರಮದಿಂದ ರಚಿಸಿರುವ `ಸಮುದಾಯ ಸಂಘಟನೆ ಕೃತಿಯು ಸಾಕಷ್ಟು ಮಟ್ಟಿಗೆ ನೀಗಿಸುತ್ತದೆ ಎಂಬುದಾಗಿ ಧಾರಾಳವಾಗಿ ಹೇಳಬಹುದಾಗಿದೆ. ಸಮಾಜಕಾರ್ಯದ ಮೂಲ ಪದ್ಧತಿಗಳಲ್ಲಿ ಒಂದಾದ `ಸಮುದಾಯ ಸಂಘಟನೆಯ ಬಗ್ಗೆ ಡಾ|| ಸಿ.ಆರ್. ಗೋಪಾಲ್‍ರವರ ಈ ಕೃತಿ ಸಾಕಷ್ಟು ಪ್ರಮಾಣದಲ್ಲಿ ಪೂರ್ಣ ಮಾಹಿತಿಗಳನ್ನು ಒದಗಿಸುತ್ತದೆ ಎಂಬುದಾಗಿ ಹೇಳಿದರೆ ಏನೇನೂ ಅತಿಶಯೋಕ್ತಿಯಾಗಲಾರದು.

`ಸಮುದಾಯ ಸಂಘಟನೆ ಕೃತಿಯಲ್ಲಿ ಉಪಯುಕ್ತವಾಗುವ ವಿಷಯ ಸಂಗ್ರಹ ಸಾಕಷ್ಟು ಹೇರಳವಾಗಿದೆ. ಸಮುದಾಯ, ಸಮುದಾಯದ ಪ್ರಕಾರಗಳು, ಸಮುದಾಯದ ಲಕ್ಷಣಗಳು, ಸಮಸ್ಯೆಗಳು, ಸಮುದಾಯ ಸಂಘಟನೆಯ ಇತಿಹಾಸ, ಸಂಘಟನೆ, ಅಭಿವೃದ್ಧಿ, ಸಂಘಟನಾ ಮಾದರಿಗಳು, ಗ್ರಹಿಕೆಗಳು, ವೈಶಿಷ್ಟ್ಯತೆಗಳು, ಧ್ಯೇಯೋದ್ದೇಶಗಳು, ತತ್ತ್ವಗಳು, ಪ್ರಕ್ರಿಯೆಗಳು, ಕಾರ್ಯತಂತ್ರಗಳು ಸಮಾಜಕಾರ್ಯ ಕಾರ್ಯಕರ್ತನ ಪಾತ್ರ, ಇವೇ ಮೊದಲಾದ ಹಲವು ಹತ್ತು ಉಪಯುಕ್ತ ವಿಚಾರಗಳ ಬಗ್ಗೆ ಸಮೃದ್ಧ ಮಾಹಿತಿಗಳನ್ನು ವಿಶೇಷ ರೀತಿಯಲ್ಲಿ ಒದಗಿಸಿದ್ದಾರೆ. ಇವುಗಳ ಜೊತೆಗೆ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿರುವ ಸರ್ವೋದಯ ಮತ್ತು ಇತರ ವಿಶಿಷ್ಟ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಸಮರ್ಪಕವಾಗಿ ಪರಿಚೈಸಿದ್ದಾರೆ. ಪ್ರತಿಪಾದಿಸಬೇಕಾದ ವಿವಿಧ ವಿಚಾರಗಳನ್ನು ಅಧ್ಯಾಯ, ಉಪ ಅಧ್ಯಾಯ ಹಾಗೂ ಶೀರ್ಷಿಕೆಗಳನ್ನಾಗಿ ವಿಭಾಗಿಸಿಕೊಂಡಿರುವ ಅನುಕ್ರಮ ಸಮಂಜಸವಾಗಿದೆ. ವಿಷಯಗಳನ್ನು ವಿಭಾಗಿಸಿಕೊಂಡಿರುವುದರಲ್ಲಿ ಒಂದು ಸೂಕ್ತ ಕ್ರಮಬದ್ಧತೆ ಇದೆ. ಒಂದು ಬಂಧ ಇದೆ.

ಪ್ರತಿಯೊಂದು ಅಧ್ಯಾಯದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ಮತ್ತು ಪೌರಾತ್ಯ ವಿದ್ವಾಂಸರ, ವಿಷಯ ಪರಿಣಿತರ ಸಿದ್ಧಾಂತಗಳು, ತತ್ವಾದರ್ಶಗಳು, ಕಾರ್ಯತಂತ್ರಗಳು, ಮೌಲ್ಯಗಳು ಮೊದಲಾದವುಗಳ ಮೂಲ ವಿವರಣೆಗಳನ್ನು ಪ್ರಾಮಾಣಿಕವಾಗಿ ಓದುಗರ ಮುಂದಿಟ್ಟಿದ್ದಾರೆ. ನಂತರ ಸದರಿ ಸಿದ್ಧಾಂತಗಳು, ತತ್ವಾದರ್ಶಗಳನ್ನು ಭಾರತಯೀಯ ಸಮಾಜಕ್ಕೆ ಹಾಗೂ ಪ್ರಸ್ತುತ ಸಂದರ್ಭಕ್ಕೆ, ಅಳವಡಿಸಿ ಪುನರ್ವ್ಯಾಖ್ಯಾನ ಮಾಡಿದ್ದಾರೆ. ಸಂದರ್ಭಗಳಿಗೆ ತಕ್ಕಂತೆ ತಮ್ಮ ಅನುಭವಗಳನ್ನೂ ಹಂಚಿಕೊಳ್ಳುತ್ತಾ ತತ್ವನಿರೂಪಣೆಗೆ ಒಂದು ಅಧಿಕೃತತೆಯನ್ನೂ ತಂದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲೇಖಕರೇ ಹೇಳಿರುವಂತೆ ಈ ಕೃತಿಯು ಸಂಶೋಧನಾತ್ಮಕವೂ ಹೌದು. ಹಾಗೆಯೇ ವಿವರಣಾತ್ಮಕವೂ ಹೌದು.

ನಮ್ಮ ಭಾರತದಲ್ಲಿನ ಸಮಾಜಕಾರ್ಯ-ಸಮುದಾಯ ಸಂಘಟನೆಗಳ ಇತಿಹಾಸವನ್ನು ಕುರಿತು ಪರಾಮರ್ಶಿಸುವಾಗ ಸನಾತನ ಹಿಂದೂ ಧರ್ಮದ ಪ್ರಮುಖ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ಭಗವದ್ಗೀತೆ, ಸ್ಮೃತಿಗಳು, ನೀತಿಶಾಸ್ತ್ರಗಳು ಮೊದಲಾದ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಸಮಾಜಕಾರ್ಯ ಪರಿಕಲ್ಪನೆ ಹಾಗೂ ಮೌಲ್ಯಗಳನ್ನು ಹೆಕ್ಕಿ ತೆಗೆದಿರುವುದು, ಹಾಗೆಯೇ ಜಗತ್ತಿನಲ್ಲಿರುವ ಇತರ ಪ್ರಮುಖ ಧರ್ಮಗಳಲ್ಲಿ ವಿಶೇಷವಾಗಿ ಪ್ರತಿಪಾದನೆಗೊಂಡಿರುವ ಸಮಾಜಕಾರ್ಯದ ಮೌಲ್ಯಗಳನ್ನು ತುಲನಾತ್ಮಕವಾಗಿ ಉಲ್ಲೇಖಿಸಿರುವುದು ಮನನೀಯವಾಗಿದೆ. ಈ ಎಲ್ಲ ಧಾರ್ಮಿಕ ಸಾಹಿತ್ಯ ಮತ್ತು ನೀತಿಗ್ರಂಥಗಳಲ್ಲಿನ ಸಮಾಜಕಾರ್ಯ, ಸಮಾಜಸೇವೆ ಮತ್ತು ಸಂಘಟನೆಯ ಬಗ್ಗೆ ಇರುವ ವಿಚಾರಗಳನ್ನು ಹುಡುಕಿ ತೆಗೆದಿರುವ ಲೇಖಕರ ಸಾಹಸ ಮೆಚ್ಚುವಂತಹುದೇ ಆಗಿರುವುದು. ಈ ಹುಡುಕಾಟ ತುಂಬಾ ದೀರ್ಘವಾಗಿರುವುದರಿಂದ ಅದನ್ನು ಒಂದು ಪ್ರತ್ಯೇಕ ಕೃತಿಯಲ್ಲಿ ತರಬಹುದಿತ್ತು.

ಸದರಿ ಗ್ರಂಥದಲ್ಲಿ ಅಲಂಕಾರಿಕ ಭಾಷೆಯಿಲ್ಲ. ಬದಲಾಗಿ ನೇರ ಹಾಗೂ ಸರಳ ಭಾಷೆಯ ಹರಿವನ್ನು ಇಲ್ಲಿ ಕಾಣಬಹುದಾಗಿದೆ. ನಿರೂಪಣೆ ದೀರ್ಘ ಎಂದೆನಿಸಿದರೂ ಸಾಕಷ್ಟು ಸಮರ್ಪಕ ಹಾಗೂ ಸಮಂಜಸವಾಗಿದೆ. ಜೊತೆಗೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇದೊಂದು ಶಾಸ್ತ್ರಗ್ರಂಥ ಆಗಿರುವುದರಿಂದ ಸಮಯೋಚಿತವಾಗಿ ಅನೇಕ ತಾಂತ್ರಿಕ ಪದಗಳು ಹಾಗೂ ಕಠಿಣ ಪದಗಳನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ. ಆಯಾ ಅಧ್ಯಾಯಗಳಲ್ಲಿ ಅವುಗಳಿಗೆ ಸೂಕ್ತ ಅರ್ಥವನ್ನು ಕೊಡುವುದರ ಜೊತೆಗೆ ಅನುಬಂಧ ಎರಡರಲ್ಲಿ ಅವುಗಳ ಅರ್ಥವನ್ನು ಕೊಡಲಾಗಿದೆ. ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ಈ ಶಬ್ದಕೋಶದಿಂದ ವಿಷಯಗಳನ್ನು ಅರ್ಥೈಸಿಕೊಳ್ಳಲು ನೆರವಾಗುತ್ತದೆ.

ಕರ್ನಾಟಕದ `ಸಮಾಜಕಾರ್ಯದ ಪಿತಾಮಹ ಎಂದೇ ಔಚಿತ್ಯಪೂರ್ಣವಾಗಿ ಗುರುತಿಸಲ್ಪಟ್ಟಿರುವ ಪ್ರೊ|| ಎಚ್.ಎಂ. ಮರುಳಸಿದ್ಧಯ್ಯನವರಿಗೆ ಈ ಕೃತಿ ಅರ್ಪಣೆಗೊಂಡಿರುವುದು ಉಚಿತವಾಗಿಯೇ ಇದೆ.

`ಸಮುದಾಯ ಸಂಘಟನೆಯ ವ್ಯಾಪ್ತಿ ವಿಸ್ತೃತವಾಗಿದೆ. ಈ ಕೃತಿ ಸಮುದಾಯ ಸಂಘಟನೆಯ ಸಂಕ್ಷಿಪ್ತ ವಿಶ್ವಕೋಶದಂತಿದೆ. ಡಾ|| ಸಿ.ಆರ್. ಗೋಪಾಲ್‍ರವರು ಅಪಾರ ಶ್ರಮವಹಿಸಿ ಉತ್ತಮ ಮಟ್ಟದಲ್ಲಿ ರಚಿಸಿದ್ದಾರೆ. ಸಮುದಾಯ ಸಂಘಟನಾ ಕ್ಷೇತ್ರಕ್ಕೆ ಇಂತಹ ಒಂದು ಆಚಾರ್ಯ ಕೃತಿಯನ್ನು ಸಕಾಲಿಕವಾಗಿ ಕೊಟ್ಟ ಡಾ|| ಸಿ.ಆರ್. ಗೋಪಾಲ್‍ರವರು ಅಭಿನಂದನಾರ್ಹರು.

ಪ್ರೊ|| ಎಚ್.ಎಂ. ಮರುಳಸಿದ್ಧಯ್ಯನವರೇ ನನಗೆ ಡಾ|| ಗೋಪಾಲ್ ಅವರನ್ನು ಪರಿಚಯ ಮಾಡಿಸಿದ್ದಾರೆ. ಡಾ|| ಗೋಪಾಲ್‍ರವರ ಹಿರಿಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರೆಂದು ಕೇಳಿ ಬಲ್ಲೆ. ಡಾ|| ಗೋಪಾಲ್‍ರವರೂ ಸುಸಂಸ್ಕೃತರು ಹಾಗೂ ಸರಳ ಜೀವಿಗಳು. ಅವರ ಮಾತು-ಭಾಷೆ ವಿಶಿಷ್ಟ ಹಾಗೂ ಅನುಭವಪೂರ್ಣ. ಶ್ರೀಯುತರು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಶಿಸ್ತನ್ನು ಅನುಸರಿಸುವ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಯ ವತಿಯಿಂದ ಮಾತ್ರವೇ ಇಂತಹ ಉದ್ಗ್ರಂಥವನ್ನು ರಚಿಸಲು ಸಾಧ್ಯ.

ಸಮಾಜಕಾರ್ಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದೊಂದು ಸಂಪನ್ಮೂಲ ಗ್ರಂಥ ಆಗುವುದರಲ್ಲಿ ಯಾವ ಸಂದೇಹವೇ ಇಲ್ಲ. ಕನ್ನಡ ಭಾಷೆ ಸರ್ವತೋಮುಖವಾಗಿ, ಸಮೃದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಬೆಳೆಯಬೇಕಾದರೆ ವಿಜ್ಞಾನದ ಎಲ್ಲ ಶಾಖೋಪಶಾಖೆಗಳಲ್ಲಿಯೂ ವಿಷಯಗಳನ್ನು ಸರಳ ಹಾಗೂ ಸುಲಭ ಶೈಲಿಯಲ್ಲಿ ಆಕರ್ಷಕ ನಿರೂಪಣೆಯೊಂದಿಗೆ ಓದುಗರಿಗೆ ಆ ವಿಷಯಗಳಲ್ಲಿ ಆಸಕ್ತಿ ಹುಟ್ಟುವಂತೆ ರಚಿಸಬೇಕಾದುದು ತುಂಬಾ ಅವಶ್ಯಕವಾದುದು. ಈ ದಿಶೆಯಲ್ಲಿ ಒಬ್ಬ ಅನುಭವೀ ಬರಹಗಾರರಾದ ವಿಷಯತಜ್ಞರಾಗಿರುವ ಸನ್ಮಾನ್ಯ ಶ್ರೀ ಡಾ|| ಸಿ.ಆರ್. ಗೋಪಾಲ್‍ರವರ ಈ ಕೃತಿಯು ಹೆಚ್ಚಿನ ಯಶಸ್ಸು ಗಳಿಸಬಲ್ಲುದೆಂದು ಧಾರಾಳವಾಗಿ ಹೇಳಬಯಸುತ್ತೇನೆ. ಈ ಕೃತಿಯು `ಸಮುದಾಯ ಸಂಘಟನೆಗೆ ಸಂಬಂಧಿಸಿದ ಹಲವಾರು ಗಮನಾರ್ಹವಾದ ವಿಷಯಗಳನ್ನು ಹೊಂದಿ ಉತ್ತಮ ವಿಷಯ ಸಂಪತ್ತಿನಿಂದ ಕೂಡಿರುವುದು.

ಲೇಖಕರು ಸರಳ, ಸುಂದರ ಹಾಗೂ ಆಕರ್ಷಕ ಶೈಲಿಯಲ್ಲಿ ಈ ಉಪಯುಕ್ತ ಗ್ರಂಥವನ್ನು ರಚಿಸಿ ಅಧ್ಯಾಫಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಓದುಗರಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಡಾ|| ಸಿ.ಆರ್. ಗೋಪಾಲ್‍ರವರಿಂದ ಇನ್ನೂ ಹೆಚ್ಚು ಹೆಚ್ಚು ಉಪಯುಕ್ತ ಗ್ರಂಥಗಳು ರಚಿತವಾಗಲೆಂದೂ, ಇವರಿಗೆ ಶುಭವಾಗಲೆಂದೂ, ಆ ದಯಾಮಯನು ಇವರಿಗೆ ಸಕಲ ಸನ್ಮಂಗಳವನ್ನುಂಟುಮಾಡಿ ಕಾಪಾಡಲೆಂದೂ ನಾನು ತುಂಬು ಹೃದಯದಿಂದ ಹಾರೈಸುತ್ತೇನೆ.
​
ಇಂತಹ ಉಪಯುಕ್ತ ಹಾಗೂ ಮೌಲಿಕ ಕೃತಿಯನ್ನು ನಿರುತ ಪ್ರಕಾಶನದಿಂದ ಪ್ರಕಟಿಸುತ್ತಿರುವುದು ಒಂದು ಸಂತಸದ ಸಂಗತಿಯೇ ಸರಿ. ನಿರುತ ಪ್ರಕಾಶನದ ಮುಖ್ಯಸ್ಥರೂ, ಕ್ರಿಯಾಶೀಲ ವ್ಯವಸ್ಥಾಪಕರೂ, ಗುಣಗ್ರಾಹಿಗಳೂ ಆದ ಶ್ರೀ ರಮೇಶ ಎಂ.ಹೆಚ್. ರವರೂ ಅಭಿನಂದನಾರ್ಹರು. ಸಮಾಜಕಾರ್ಯ ಪ್ರಶಿಕ್ಷಕರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಈ ಕೃತಿಯನ್ನು ಆದರದಿಂದ ಬರಮಾಡಿಕೊಂಡು ಲೇಖಕರು ಮತ್ತು ಪ್ರಕಾಶಕರನ್ನು ಪ್ರೋತ್ಸಾಹಿಸುತ್ತಾರೆಂಬುದಾಗಿ ನಂಬುತ್ತೇನೆ.
 
ದಿ: 2-7-2018
 
ಪ್ರೊ|| ಕೆ. ಭೈರಪ್ಪ
ರಾಜ್ಯೋತ್ಸವ ಹಾಗೂ ಎಕ್ಸಲೆನ್ಸ್ ಪ್ರಶಸ್ತಿ ಪುರಸ್ಕೃತರು, `ಜೈಜಗತ್‍ಶ್ರೀ ನಿಲಯ, ಮಾಯಸಂದ್ರ, ತುಮಕೂರು ಜಿಲ್ಲೆ.
0 Comments



Leave a Reply.

    Archives

    September 2020
    August 2020
    July 2020

    Categories

    All
    English Books
    Kannada Books


    List Your Product on Our Website

    RSS Feed


Site

  • Home
  • About Us
  • HR Blog
  • HR Books
  • Services
  • HR Job Openings
  • ​​List Your Product on Our Website
Vertical Divider

Major Services

  • Prevention of Sexual Harassment (PoSH)
  • Domestic Enquiry
  • Translations & Typing
  • Contract Labour
  • Printing
  • Publications
  • Payroll
  • ​Registration Services

Our Other Websites

  • ​www.hrkancon.com  
  • www.niratanka.org  
  • www.socialworkfootprints.org
Vertical Divider

Training Programmes

  • Certificate Course on Prevention of Sexual Harassment (PoSH)
  • Disciplinary Proceedings & Domestic Enquiry
  • Plan Your Retirement
  • ​Microsoft Excel (Corporate) Training

Contact Us

  • 080-23213710
  • +91-9980066890
  • +91-8310241136
  • +91-8073067542
  • MAIL-hrniratanka@mhrspl.com

ONLINE STORE
List Your Products in our Website 
Receive email updates on the new books & offers for the subjects of interest to you.
M&HR Solutions Private Limited
Copyright :MHRSPL-2020, website designed and developed by :www.socialworkfootprints.org